ವಿಜಯಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ

Public TV
1 Min Read
WEATHER

ವಿಜಯಪುರ: ಸಿಡಿಲು (Lightning) ಬಡಿದು ಇಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ತಾಲೂಕಿನಲ್ಲಿ ನಡೆದಿದೆ.

ಇಂಡಿ ಪಟ್ಟಣದಲ್ಲಿ ಭೀರಪ್ಪ ಅವರಾದಿ (15) ಎಂಬ ಬಾಲಕ ಸಿಡಿಲಿಗೆ ಬಲಿಯಾಗಿದ್ದಾನೆ. ಇನ್ನೂ ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮದಲ್ಲಿ ಸೋಮಶೇಖರ್ ಕಾಶಿನಾಥ ಪಟ್ಟಣಶೆಟ್ಟಿ (45) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಲೋಕ ಸಮರದಲ್ಲಿ ಒಕ್ಕಲಿಗ ಜಟಾಪಟಿ – ಏನಿದು ಫೋನ್‌ ಟ್ಯಾಪ್‌ ಕೇಸ್‌?

ರಾಜ್ಯದಲ್ಲಿ ತೀವ್ರ ಬೇಸಿಗೆಯ ನಡುವೆಯೂ, ಹಲವು ಜಿಲ್ಲೆಗಳಲ್ಲಿ ವರುಣ ತಂಪೆರೆದಿದ್ದಾನೆ. ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು, ವಿಜಯಪುರ ಸೇರಿದಂತೆ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿಜಯಪುರ ನಗರ, ತಿಕೋಟ ತಾಲೂಕಿನ ಘೋಣಸಗಿ, ಬಾಬಾನಗರ, ಹುಬನೂರು, ಸೋಮದೇವರಹಟ್ಟಿ, ಬಿಜ್ಜರಗಿ, ಕಳ್ಳಕವಟಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿ ಸಹಿತ ಹಗುರ ಮಳೆಯಾಗಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮಳೆ – ಬಿಸಿಲಿನಿಂದ ಕಂಗೆಟ್ಟ ಜನಕ್ಕೆ ತಂಪೆರೆದ ವರುಣ

Share This Article