ಬೆಂಗಳೂರು: ರಾಜ್ಯದಲ್ಲಿ ತೀವ್ರ ಬೇಸಿಗೆಯ ನಡುವೆಯೂ, ಹಲವು ಜಿಲ್ಲೆಗಳಲ್ಲಿ ವರುಣ (Rain) ತಂಪೆರೆದಿದ್ದಾನೆ. ಶಿವಮೊಗ್ಗ (Shivamogga), ಮಡಿಕೇರಿ (Madikeri), ಚಿಕ್ಕಮಗಳೂರು (Chikkamagaluru), ವಿಜಯಪುರ ಸೇರಿದಂತೆ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗಿದೆ.
ಕೊಡಗಿನ ಹಲವೆಡೆ ಹಗುರ ಮಳೆಯಾಗಿದೆ. ಜಿಲ್ಲೆಯ ವಿರಾಜಪೇಟೆಯ ಹಲವಾರು ಗ್ರಾಮೀಣ ಭಾಗಗಳಲ್ಲಿ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ತತ್ತರಿಸಿದ ಜನಕ್ಕೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಒಂದುವಾರದಿಂದ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಸಂಜೆಯ ವೇಳೆ ಮಳೆಯಾಗುತ್ತಿದೆ. ಇನ್ನೂ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಬಿದ್ದಿದ್ದು ಬಿಸಿಲಿನಿಂದ ಬಸವಳಿದ ಜನಕ್ಕೆ, ವರುಣ ಕೊಂಚ ರಿಲ್ಯಾಕ್ಸ್ ಕೊಟ್ಟಿದ್ದಾನೆ. ಇದನ್ನೂ ಓದಿ: ಈಶ್ವರಪ್ಪ ಅಂದ್ರೆ ಯಾರು? ಆ ಹೆಸರಿನವ್ರು ಯಾರೂ ಗೊತ್ತಿಲ್ಲ: ರಾಧಾಮೋಹನ್ ದಾಸ್ ವ್ಯಂಗ್ಯ
Advertisement
ಚಿಕ್ಕಮಗಳೂರಿನ, ಬಾಳೆಹೊನ್ನೂರು, ಎನ್‍ಆರ್‍ಪುರ, ಆವುತಿ, ಹಂಗರವಳ್ಳಿ, ಕೆರೆಮಕ್ಕಿ, ಬೈಗೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯಿಂದ ರೈತರು ಹಾಗೂ ಕಾಫಿ ಬೆಳೆಗಾರರಲ್ಲಿ ಸಂಭ್ರಮ ಮನೆಮಾಡಿದೆ.
Advertisement
Advertisement
ವಿಜಯಪುರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿಜಯಪುರ ನಗರ, ತಿಕೋಟ ತಾಲೂಕಿನ ಘೋಣಸಗಿ, ಬಾಬಾನಗರ, ಹುಬನೂರು, ಸೋಮದೇವರಹಟ್ಟಿ, ಬಿಜ್ಜರಗಿ, ಕಳ್ಳಕವಟಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿ ಸಹಿತ ಹಗುರ ಮಳೆಯಾಗಿದೆ.
Advertisement
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಹಲವಡೆ ಜೋರು ಮಳೆಯಾಗಿದೆ. ಕಲಬುರಗಿ ನಗರ ಸೇರಿ ಜಿಲ್ಲೆಯ ಹಲವಡೆ ಮೋಡ ಕವಿದ ವಾತಾವರಣವಿದ್ದು, ರಾತ್ರಿ ವೇಳೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು