ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ವಿದ್ಯಾರ್ಥಿಗಳಿಬ್ಬರ ರಕ್ಷಣೆ

Public TV
1 Min Read
GOKARNA

ಕಾರವಾರ: ಸಮದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ರಮೇಶ್ ಯಾದವ್ ಮಧ್ಯಪ್ರದೇಶ ಮೂಲದ ಕಮಲೇಶ್ ಕುಮಾರ್ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.

KWR RESQU AV 1

ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ರು, ಈ ಸಂದರ್ಭದಲ್ಲಿ ಮುಖ್ಯ ಕಡಲ ತೀರದಲ್ಲಿ ನೀರಿಗೆ ಇಳಿದಾಗ ಅಲೆಗೆ ಎರಡು ಜನ ಕೊಚ್ಚಿ ಹೋಗಿದ್ದರು.

ಕೂಡಲೇ ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿ ಮೋಹನ್ ಅಂಬಿ, ರಾಜು ಅಂಬಿ, ಚಂದ್ರಕಾಂತ್ ಹಾಗೂ ಪುರುಷೋತ್ತಮ್ ಹರಿಕಾಂತ್ ಎಂಬವರು ರಮೇಶ್ ಯಾದವ್ ಹಾಗೂ ಕಮಲೇಶ್ ಕುಮಾರ್ ರನ್ನು ರಕ್ಷಿಸಿದ್ದಾರೆ.

ಈ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KWR RESQU AV 4

KWR RESQU AV 3

KWR RESQU AV 2

Share This Article
Leave a Comment

Leave a Reply

Your email address will not be published. Required fields are marked *