ಬೆಂಗಳೂರು: ಹೊಳೆಯಲ್ಲಿ ನಿಧಿ ಸಿಕ್ಕಿದೆ, 5 ಕೆಜಿ ಚಿನ್ನ ಇದೆ ಅಂತ ಬಂದು ಸ್ಯಾಂಪಲ್‍ಗೆ ಅಂತ ಒರಿಜಿನಲ್ ಗೋಲ್ಡ್ ಕೊಡ್ತಾರೆ. ಆಮೇಲೆ ನಕಲಿ ಚಿನ್ನ ಕೊಟ್ಟು ನಿಮ್ಮನ್ನ ಯಾಮಾರಿಸೋ ಗ್ಯಾಂಗ್ ಒಂದು ಇದೀಗ ಸಿಕ್ಕಿಬಿದ್ದಿದೆ.
ಹೌದು. ಪಬ್ಲಿಕ್ ಟಿವಿಯ ‘ಆಪರೇಷನ್ ಗೋಲ್ಡ್’ ಕಾರ್ಯಾಚರಣೆಯ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ಇವರಿಗೆ ಕನ್ನಡ ಬರಲ್ಲ, ಕೇವಲ ಹಿಂದಿ ಮಾತ್ರ ಮಾತಾಡ್ತಾರೆ. ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಮೊದಲು ಪರಿಚಯ ಮಾಡಿಕೊಳ್ಳುತ್ತಾರೆ.
Advertisement
Advertisement
ಕುರುಬರಹಳ್ಳಿ ನಿವಾಸಿ, ವರ್ತಕ ಪರಮೇಶ್ ಅನ್ನೋರಿಗೆ ಚಿನ್ನದ ದೋಖಾ ಗ್ಯಾಂಗ್ ಪರಿಚಯವಾಗಿತ್ತು. ಬಳಿಕ ಕಳೆದ ಹದಿನೈದು ದಿನಗಳಿಂದಲೂ ಕಿಲಾಡಿಗಳು ವ್ಯಾಪಾರ ಕುದುರಿಸುತಿದ್ದರು. ಮೊದಲು 5 ಕೆಜಿ ಚಿನ್ನ ಇದೆ. 30 ಲಕ್ಷ ಕೊಡಿ ಎಂದು ಬೇಡಿಕೆಯಿಟ್ಟಿದ್ದರು. ಅಂತ ಪರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಕುರುಬರ ಹಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿ ನಕಲಿ ಚಿನ್ನ ನೀಡಿ 3 ಲಕ್ಷ ರೂ. ದೋಖಾ ಮಾಡಿತ್ತು ಗ್ಯಾಂಗ್.
Advertisement
ಬಳಿಕ ನಕಲಿ ಚಿನ್ನ ಕೊಟ್ಟು ದುಡ್ಡು ಪಡೆಯಲು ಇಬ್ಬರು ಖದೀಮರು ಬಂದಿದ್ದರು. ಈ ವೇಳೆ ಪರಮೇಶ್, ವಿನೋದ್ ಹಾಗೂ ಲಕ್ಷ್ಮಮ್ಮ ಸೇರಿ ಅವರನ್ನು ಸಿನಿಮಾ ಸ್ಟೈಲಲ್ಲಿ ಚೇಸ್ ಮಾಡಿ ಹಿಡಿದಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ಸ್ಥಳೀಯರು ಸೇರಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
Advertisement
ಸದ್ಯ ಪೊಲೀಸರು ಚಿನ್ನದ ದೋಖಾ ಮಾಡುವ ಗ್ಯಾಂಗ್‍ಗಾಗಿ ಹುಡುಕಾಟ ಆರಂಭಿಸಿದ್ದಾರೆ.