ನವದೆಹಲಿ: ತಮ್ಮ ಗೆಳತಿಯರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಲು ಯುವಕರಿಬ್ಬರು ಕಳ್ಳತನಕ್ಕೆ ಕೈಹಾಕಿ ಪೊಲೀಸರ ಅತಿಥಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬಂಧಿತರನ್ನು ಶಾಸ್ತ್ರಿ ನಗರ ದೆಹಲಿ ನಿವಾಸಿ ಶಶಾಂಕ್ ಅಗರ್ವಾಲ್ (32) ಮತ್ತು ಶಕುರ್ಬಸ್ತಿ ನಿವಾಸಿ ಅಮರ್ ಸಿಂಗ್ (29) ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಗೆಳತಿಯರಿಗೆ ದುಬಾರಿ ಉಡುಗೊರೆ ಕೊಡಿಸಲು ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬಳಿಯಿಂದ ದರೋಡೆ ಮಾಡಿದ್ದಾರೆ.
Advertisement
Advertisement
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಗುರುವಾರ ಡೆಲಿವರಿ ಹುಡುಗನೊಬ್ಬ ಪಂಜಾಬಿ ಬಾಗ್ ಪ್ರದೇಶಕ್ಕೆ ಪಾರ್ಸೆಲ್ ತಲುಪಿಸಲು ಬಂದಿದ್ದಾಗ ಈ ಇಬ್ಬರು ಅವನಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಪಾರ್ಸೆಲ್ ಬ್ಯಾಗ್‍ನಲ್ಲಿ ದುಬಾರಿ ಮೊಬೈಲ್ ಫೋನ್‍ಗಳು ಸೇರಿದಂತೆ ಹಲವಾರು ಉಡುಗೊರೆ ವಸ್ತುಗಳು ಇದ್ದವು ಎಂದು ಹೇಳಿದ್ದಾರೆ.
Advertisement
ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಮೊದಲು ಯುವಕರು ಆನ್‍ಲೈನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದು, ಇಬ್ಬರಿಗೂ ದೀಪಾವಳಿ ಸಮಯದಲ್ಲಿ ಜನ ಜಾಸ್ತಿ ಆನ್‍ಲೈನ್ ಅಲ್ಲಿ ಶಾಪಿಂಗ್ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಜನರು ಆಫರ್ ಇರುವ ಕಾರಣ ದುಬಾರಿ ಮೊಬೈಲ್ ಖರೀದಿಸುತ್ತಾರೆ ಎಂದು ತಿಳಿದಿತ್ತು. ಆದ್ದರಿಂದ ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬ್ಯಾಗ್ ಕಳವು ಮಾಡಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
Advertisement
ಈಗ ಕಳವು ಮಾಡಿದ ಬ್ಯಾಗನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರಿಗೂ ಗೆಳತಿಯರಿದ್ದು ಅವರು ದೀಪಾವಳಿ ಹಬ್ಬಕ್ಕೆ ಐಫೋನ್-11 ಗಿಫ್ಟ್ ಕೇಳಿದ್ದಾರೆ. ಅವರಿಗೆ ಉಡುಗೊರೆ ನೀಡಲು ಈ ರೀತಿ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.