DistrictsHassanKarnatakaLatestMain Post

ಕಾಫಿ ತೋಟದಲ್ಲಿ ಕಾಡಾನೆಗಳ ಕಾಳಗ – ಫಸಲಿಗೆ ಬಂದಿದ್ದ ಕಾಫಿ, ಮೆಣಸು ನಾಶ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಕಾಡಾನೆಗಳ ಕಾಳಗಕ್ಕೆ ಭಾರಿ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಡರಾತ್ರಿ ಡಿಸೋಜ ಎಂಬುವವರ ಕಾಫಿ ತೋಟದಲ್ಲಿ ಎರಡು ಸಲಗಗಳ ನಡುವೆ ಕಾದಾಟ ನಡೆದಿದ್ದು, ಫಸಲಿಗೆ ಬಂದಿದ್ದ ಕಾಫಿ, ಮೆಣಸಿನ ಗಿಡಗಳು, ಬೈನೆ ಮರಗಳು ನೆಲಸಮವಾಗಿವೆ. ಬೆಳೆ ನಷ್ಟದಿಂದ ತೋಟದ ಮಾಲೀಕರು ಕಂಗಾಲಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಡಿಸೋಜ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆ ಲಂಡನ್‍ನಲ್ಲಿ ಗೋ ಪೂಜೆ ಮಾಡಿದ ರಿಷಿ ಸುನಾಕ್

ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕಾಫಿ ತೋಟದ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಶಕಗಳ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಲೆನಾಡು ಭಾಗದ ಜನ ಹಿಡಿಶಾಪ ಹಾಕಿದ್ದಾರೆ. ಕಳೆದ ಕೆಲದಿನಗಳಿಂದ ಪ್ರತಿದಿನ ಜಿಲ್ಲೆಯ ಜನರು ಆನೆಗಳ ಉಪಟಳದಿಂದ ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ: ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

Live Tv

Leave a Reply

Your email address will not be published.

Back to top button