InternationalLatestMain PostNational

ಪತ್ನಿ ಜೊತೆ ಲಂಡನ್‍ನಲ್ಲಿ ಗೋ ಪೂಜೆ ಮಾಡಿದ ರಿಷಿ ಸುನಾಕ್

ಲಂಡನ್: ಬ್ರಿಟನ್ ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯಲ್ಲಿರುವ ಮಾಜಿ ಬ್ರಿಟಿಷ್ ಹಣಕಾಸು ಸಚಿವ, ಇನ್ಫೋಸಿಸ್ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಲಂಡನ್‍ನಲ್ಲಿ ಗೋ ಪೂಜೆ ಮಾಡಿದ್ದಾರೆ. ಇದೀಗ ಈ ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಂಗ್ಲೆಂಡ್‌ನಲ್ಲಿ ವಾಸಿಸುವ ಭಾರತೀಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇತ್ತೀಚೆಗಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಭಕ್ತಿವೇದಾಂತ ಮೇನರ್ ದೇವಾಲಯಕ್ಕೆ ಪತ್ನಿ ಜೊತೆಗೆ ರಿಷಿ ಸುನಕ್ ಅವರು ಭೇಟಿ ನೀಡಿದ್ದರು. ಇದರ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಗೋ ಬ್ಯಾಕ್ ಇಂಡಿಯಾ, ನೀವು ನಮ್ಮ ದೇಶ ಹಾಳು ಮಾಡ್ತಿದ್ದೀರಾ – ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯಿಂದ ಹಲ್ಲೆ

ಇದೀಗ ರಿಷಿ ಸುನಕ್ ದಂಪತಿ ಗೋಶಾಲೆಗೆ ಭೇಟಿ ನೀಡಿ, ಹಸುವಿನ ಪೂಜೆ ಮಾಡಿದ್ದಾರೆ. ವಿಡಿಯೋದಲ್ಲಿ ರಿಷಿ ಸುನಕ್- ಅಕ್ಷತಾ ಮೂರ್ತಿ ದಂಪತಿ ಗೋಪೂಜೆಗೆ ಸಿದ್ಧವಾಗಿರುವ ಹಸುವಿನ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ಪಾತ್ರೆಯಲ್ಲಿದ್ದ ಪವಿತ್ರವಾದ ನೀರನ್ನು ಹಸುವಿನ ಕಾಲಿನ ಮೇಲೆ ಸಿಂಪಡಿಸಿ ನಂತರ ದಂಪತಿ ಆರತಿ ಬೆಳಗಿದ್ದಾರೆ. ಕೊನೆಗೆ ಹಸುವಿಗೆ ಕೈ ಮುಗಿದು ರಿಷಿ ಸುನಕ್ ನಮಸ್ಕರಿಸಿರುವುದನ್ನು ಕಾಣಬಹುದಾಗಿದೆ.

ರಿಷಿ ಸುನಕ್ ಅವರು ಯಾರ್ಕ್‍ಷೈರ್‍ನ ರಿಚ್‍ಮಂಡ್‍ನಿಂದ ಮೂರನೇ ಬಾರಿಗೆ ಮರು ಆಯ್ಕೆಯಾದಾಗ ಭಗವದ್ಗೀತೆಯನ್ನು ಹಿಡಿದುಕೊಂಡು ಇಂಗ್ಲೆಂಡ್‍ನ ಸಂಸತ್ತಿನಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗೇ, ಅವರು ಚಾನ್ಸಲರ್ ಆಗಿದ್ದಾಗ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಇಂಗ್ಲೆಂಡ್‍ನಲ್ಲಿರುವ ಭಾರತೀಯರ ಮನಗೆದ್ದಿದ್ದರು. ಇದನ್ನೂ ಓದಿ: 3 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದು ಐವರು ಸಾವು, 7 ಮಂದಿಗೆ ಗಾಯ

Live Tv

Leave a Reply

Your email address will not be published.

Back to top button