ಎರಡು ಡೋಸ್ ಲಸಿಕೆ ಪಡೆದವರಿಗೆ ಓಮಿಕ್ರಾನ್ ತೀವ್ರತೆ ಇರಲ್ಲ: ಕೆ. ಸುಧಾಕರ್

Public TV
2 Min Read
K. Sudhakar

– ಮೊದಲ ಡೋಸ್ ಶೇ.93, 2ನೇ ಡೋಸ್ ಶೇ.64 ಮಂದಿ ತೆಗೆದುಕೊಂಡಿದ್ದಾರೆ

ಬೆಂಗಳೂರು: ಮೊದಲ ಡೋಸ್ ಶೇ.93, ಎರಡನೇ ಡೋಸ್ ಶೇ.64 ಜನರು ಕೊರೊನಾ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಓಮಿಕ್ರಾನ್ ತೀವ್ರತೆ ಇರಲ್ಲ ಎಂದು ಸಚಿವ ಕೆ.ಸುಧಾಕರ್ ತಿಳಿಸಿದರು.

ಹೆಚ್ಚುತ್ತಿರುವ ಸೋಂಕಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ಜನರ ರಿಪೋರ್ಟ್ ಇನ್ನೂ ಬಂದಿಲ್ಲ. ರಿಪೋರ್ಟ್ ಬಂದ ಕೂಡಲೇ ಮಾಹಿತಿ ಕೊಡ್ತೀವಿ. ನಮ್ಮ ರಾಜ್ಯದಲ್ಲಿ ಓಮಿಕ್ರಾನ್ ಬಂದ ಸಂಪರ್ಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಪರ್ಕಿತರು ಎರಡು ಡೋಸ್ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

K. Sudhakar 1

ಎರಡು ಡೋಸ್ ಪಡೆದವರಿಗೆ ತೀವ್ರತೆ ಇರೋದಿಲ್ಲ. ಸಂಪೂರ್ಣ ರೋಗ ನಿರೋಧಕ ಬರಬೇಕಾದ್ರೆ ಎರಡು ಡೋಸ್ ಪಡೆಯಬೇಕು. ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಡೆಲ್ಟಾವನ್ನು ನಾವು ಎದುರಿಸಿದ್ದೇವೆ. ಓಮಿಕ್ರಾನ್ ಹರಡುವಿಕೆ ಇದೆ. ಆದ್ರೆ ತೀವ್ರತೆ ಇಲ್ಲ. ಆತಂಕ ಪಡೋ ಅಗತ್ಯ ಇಲ್ಲ. ಮುಂಜಾಗ್ರತೆ ತೆಗೆದುಕೊಳ್ಳಿ ಎಂದು ಜನರಲ್ಲಿ ಮನವಿಯನ್ನು ಮಾಡಿಕೊಂಡರು.

ನಮ್ಮಲ್ಲಿ 70 ಲಕ್ಷ ಲಸಿಕೆ ದಾಸ್ತಾನು ಇದೆ. ಆದಷ್ಟು ಬೇಗ ಜನರು ಲಸಿಕೆ ಪಡೆಯಬೇಕು ಎಂದು ತಿಳಿಸಿದ ಅವರು ಅಂತರಾಷ್ಟ್ರೀಯ ವಿಮಾನ ಸ್ಥಗಿತ ವಿಚಾರವಾಗಿ ಮಾತನಾಡಿದ್ದು, ಈ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತೆ. ಕೇಂದ್ರ ಈ ಬಗ್ಗೆ ಅಧ್ಯಯನ ಮಾಡ್ತಿದೆ. ಸಮಗ್ರ ವರದಿ ಬಂದ ಮೇಲೆ ಕೇಂದ್ರ ಕ್ರಮ ತೆಗೆದುಕೊಳ್ಳುತ್ತೆ ಎಂದು ತಿಳಿಸಿದರು.

CORONA 2 1

ಜನವರಿಯಲ್ಲಿ ಮೂರನೇ ಅಲೆ ಬರುತ್ತೆ ಅನ್ನೋ ತಜ್ಞರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಸಾಂಕ್ರಾಮಿಕ ರೋಗ ಬಂದ್ರೆ ಮೊದಲ ಅಲೆ ಮತ್ತು ಎರಡನೇ ಅಲೆ ತೀವ್ರವಾಗಿ ಇರುತ್ತೆ. ಹಿಂದೆ ಬಂದ ಅನೇಕ ಸಾಂಕ್ರಾಮಿಕ ರೋಗಗಳಲ್ಲಿ ಇದು ಸಾಬೀತಾಗಿದೆ. ಸಾಂಕ್ರಾಮಿಕ ರೋಗಗಳಲ್ಲಿ ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಇರುತ್ತೆ. ಮೂರನೇ ಅಲೆ ಮತ್ತು 4 ನೇ ಅಲೆ ತೀವ್ರತೆ ಸ್ವಲ್ಪ ಕಡಿಮೆ ಇರುತ್ತೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಎಲ್ಲರೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ವಿಶೇಷ ಕ್ಲಸ್ಟರ್‌ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಹೆಚ್ಚು: ಬೊಮ್ಮಾಯಿ

ಮಕ್ಕಳಲ್ಲಿ ಸೋಂಕು ಹರಡುತ್ತಿರೋ ವಿಚಾರವಾಗಿ, ಡೆಲ್ಟಾ, ಡೆಲ್ಟಾ ಪ್ಲಸ್ ಬಂದಾಗಲೂ ಮಕ್ಕಳಿಗೆ ಯಾವುದೇ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಿಲ್ಲ. ಇದು ಮಕ್ಕಳಿಗೆ ಯಾವುದೇ ತೀವ್ರ ಪರಿಣಾಮ ಬಿರುವುದಿಲ್ಲ. ಹೀಗಾಗಿ ಆತಂಕ ಪಡುವ ಯಾವುದೇ ಅವಶ್ಯಕತೆ ಇಲ್ಲ. ಡೆಲ್ಟಾ ಬಂದಾಗಲೂ ಮಕ್ಕಳ ಮೇಲೆ ಪರಿಣಾಮ ಬೀರಿಲ್ಲ. ಒಂದು ವೇಳೆ ಓಮಿಕ್ರಾನ್ ಬಂದರು ದೊಡ್ಡ ಮಟ್ಟದ ಪರಿಣಾಮ ಮಕ್ಕಳ ಮೇಲೆ ಆಗಲ್ಲ ಎಂದು ಪೋಷಕರಿಗೆ ಧೈರ್ಯ ತುಂಬಿದರು.

Share This Article
Leave a Comment

Leave a Reply

Your email address will not be published. Required fields are marked *