ಬೆಂಗಳೂರು: ಕಳೆದು ಎರಡು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಗ್ಗೆ ಮಳೆಗೆ ಮತ್ತೊಂದು ಬಲಿಯಾಗಿದೆ.
ಸಿ ವಿ ರಾಮನ್ ನಗರದ ಕೃಷ್ಣಪ್ಪ ಗಾರ್ಡನ್ ನಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 16 ವರ್ಷದ ನರಸಮ್ಮ ಎಂಬ ಬಾಲಕಿ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಸದ್ಯ ಬಾಲಕಿಯ ಶವ ಪತ್ತೆಯಾಗಿದೆ.
Advertisement
ಮೂಲತಃ ಕಲಬುರ್ಗಿ ಜಿಲ್ಲೆಯವರಾದ ವೆಂಕಪ್ಪ ಮತ್ತು ಕಾಶಿ ಬಾಯಿ ದಂಪತಿಯ ಮಗಳಾದ ನರಸಮ್ಮ ಶೌಚಾಲಯಲ್ಲೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಳು. ಬಾಲಕಿ ಶವ ಮಳೆ ನೀರಿನಲ್ಲಿ ಕೊಚ್ಚಿ ಹೋದ ಸ್ಥಳದಿಂದ 400 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸದ್ಯ ಶವವನ್ನು ಸ್ಥಳೀಯರು ಹೊರಗೆತ್ತಿದ್ದಾರೆ.
Advertisement
Advertisement
ಈಕೆಗೆ 15 ದಿನದಲ್ಲಿ ಮದುವೆಯೂ ನಿಗದಿಯಾಗಿತ್ತು. ಈ ಮೊದಲೇ ದುರಂತ ಎದುರಾಗಿರುವುದರಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ರಘು ಸ್ಥಳಕ್ಕೆ ದೌಡಾಯಿಸಿದ ಸಂದರ್ಭದಲ್ಲಿ ಶಾಸಕರ ವಿರುದ್ಧ ಸ್ಥಳೀಯರು ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಜನರ ಆಕ್ರೋಶಕ್ಕೆ ಬೆದರಿ ಶಾಸಕರು ಮತ್ತು ಬೆಂಬಲಿಗರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
Advertisement
ತಾಯಿ ಶವ ಪತ್ತೆ: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಕೆಂಪೇಗೌಡ ಲೇಔಟ್ ನ ರಾಜಕಾಲುವೆಯಲ್ಲಿ ತಾಯಿ ಪುಷ್ಪ ಹಾಗೂ ಮಗಳು ನಿಂಗವ್ವ ನೀರಿನಲ್ಲಿ ಕೊಚ್ಚಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಾಯಿ ಶವ ಪತ್ತೆಯಾಗಿದೆ.
ಕುಂಬಳಗೋಡು ರಾಜಕಾಲುವೆ ಬಳಿ ಇಂದು ಪುಷ್ಪಳಾ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಪುಷ್ಪ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅದೇ ಸ್ಥಳದಲ್ಲಿ ತಾಯಿ ನಿಂಗವ್ವನ ಮೃತದೇಹಕ್ಕಾಗಿ ಎನ್‍ಡಿಆರ್‍ಎಫ್ , ಬಿಬಿಎಂಪಿ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚಾರಣೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ತಂಡ ಎರಡು ದಿನಗಳ ಬಳಿಕ ಪತ್ತೆಯಾದ ಪುಷ್ಪ ಶವವನ್ನು ಹೊರತೆಗೆಯಲು ಹರಸಾಹಸಪಟ್ಟಿದ್ದಾರೆ. ನೀರಿನ ರಭಸ ಹೆಚ್ಚಾಗಿದ್ದರಿಂದ ಶವ ಹೊರತೆಗೆಯಲು ಕಷ್ಟವಾಯಿತು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸವಣ್ಣ ಹೇಳಿದ್ದಾರೆ.
https://www.youtube.com/watch?v=3-CXRwsdAew
https://www.youtube.com/watch?v=_pU2WXHoAA4