ಹುಬ್ಬಳ್ಳಿ: ಜನಸಂಖ್ಯಾ (Population) ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಆರೋಗ್ಯ ಇಲಾಖೆಯಿಂದ (Health Department) ಇದೇ ತಿಂಗಳ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪುರುಷ ಸಂತಾನಹರಣ ಚಿಕಿತ್ಸೆ (Vasectomy Treatment) ಬೃಹತ್ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪುರುಷರಿಗಾಗಿ ಗಾಯವಿಲ್ಲದ, ಹೊಲಿಗೆಯಿಲ್ಲದ ಬೃಹತ್ ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸಾ (Vasectomy Treatment) ಶಿಬಿರವನ್ನು ಚಿಟಗುಪ್ಪಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ. ಇದನ್ನೂ ಓದಿ: ಹಿಂದೂ ಸಂಕೇತ ಬಳಸಿ, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ – ಪೇಜಾವರ ಶ್ರೀ ಬೇಸರ
Advertisement
Advertisement
ಈ ಚಿಕಿತ್ಸೆ ಮಾಡಿಸಿಕೊಂಡವರಿಗೆ ಸರ್ಕಾರದಿಂದ (Government) 1,100 ರೂ. ಸಹಾಯಧನವನ್ನೂ ನೀಡಲಾಗುತ್ತದೆ. ಸರ್ಕಾರಿ ನೌಕರರಾಗಿದ್ದಲ್ಲಿ ವಿಶೇಷ ಭತ್ಯೆಯನ್ನು ವೇತನದಲ್ಲಿ ಪಡೆದುಕೊಳ್ಳಬಹುದಾಗಿದೆ. ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದು ಎಂದು ಹುಬ್ಬಳ್ಳಿ ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ
Advertisement
Advertisement
ನೋಂದಣಿಗಾಗಿ ಮೊಬೈಲ್ ಸಂಖ್ಯೆ: 9481734230, 7353921555, 9880907064 ಸಂಪರ್ಕಿಸುವಂತೆ ಕೋರಿದೆ.