ಹುಬ್ಬಳ್ಳಿ: ವಂಚನೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು ಆರೋಪಿಗಳ ಆಸ್ತಿ ಜಪ್ತಿ ಮಾಡಿದೆ. ಇಡಿ (ED) ಯಿಂದ ಇಬ್ಬರು ಉದ್ಯಮಿಗಳ 40.22 ಕೋಟಿ ಆಸ್ತಿ ಜಪ್ತಿಗೆ ಅದೇಶಿಸಲಾಗಿದೆ. ಶೀತಲ್ ಕುಮಾರ್, ಜಿನೇಂದ್ರ ಮಗ್ದುಮ್ ಅವರಿಗೆ ಸೇರಿದ ಆಸ್ತಿ ಜಪ್ತಿ ಮಾಡಲಾಗಿದೆ. ಈ ಇಬ್ಬರು ಉದ್ಯಮಿ ಸಂಜಯ್ ಘೋಡಾವತ್‌ಗೆ ವಂಚಿಸಿದ್ದ ಆರೋಪವಿತ್ತು.
Advertisement
ಸ್ಟಾರ್ ಏರ್‌ಲೈನ್ಸ್ ಮಾಲೀಕ ಸಂಜಯ್ ಘೋಡಾವತ್ ಜೊತೆ ಆರೋಪಿಗಳು ಸ್ನೇಹ ಬೆಳೆಸಿದ್ದರು. ರಿಯಲ್ ಎಸ್ಟೇಟ್ ಉದ್ಯಮದ ಹೆಸರಲ್ಲಿ ವಂಚಿಸಿದ್ದರು. ಬೇರೊಬ್ಬರ 525 ಕೋಟಿ ರೂ. ಹಣವನ್ನು ತಮ್ಮ ವೈಯಕ್ತಿಕ ಖಾತೆ ಹಾಗೂ ಇತರರ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಉದ್ಯಮಿ ಸಂಜಯ್ ದನ್ ಚೆಂದ್ ಘೋಡಾವತ್ ವಂಚನೆ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – SITಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ
Advertisement
ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಘೋಡಾವತ್ ದೂರು ದಾಖಲಿಸಿದ್ದರು. ಬಹು ಕೋಟಿ ವಂಚನೆ ಪ್ರಕರಣವಾಗಿದ್ದರಿಂದ ಹುಬ್ಬಳ್ಳಿ ಪೊಲೀಸರು ED ಗೆ ಪ್ರಕರಣ ಹಸ್ತಾಂತರ ಮಾಡಿದ್ರು. ED ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿದೆ.
Advertisement
Advertisement
ಇದೀಗ ಇಬ್ಬರು ಆರೋಪಿಗಳಿಗೆ ಸೇರಿದ ಆಸ್ತಿ ಜಪ್ತಿ ಮಾಡಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯದಲ್ಲಿನ ಮನೆ, ಅಪಾರ್ಟ್ಮೆಂಟ್, ವಿಂಡ್ ಮಿಲ್ ಸೇರಿದಂತೆ 12 ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ದಂಡ
Web Stories