ಎರಡು ಬಸ್ ಮುಖಾಮುಖಿ ಡಿಕ್ಕಿ – 5 ಮಂದಿಗೆ ಗಂಭೀರ ಗಾಯ

Advertisements

ದಾವಣಗೆರೆ: ಎರಡು ಖಾಸಗಿ ಬಸ್‍ಗಳು ಮುಖಾಮುಖಿ ಡಿಕ್ಕಿಯಾದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊರ ವಲಯದಲ್ಲಿ ನಡೆದಿದೆ.

Advertisements

ಶಿವಮೊಗ್ಗದಿಂದ ದಾವಣಗೆರೆಗೆ ಬರುತ್ತಿದ್ದ ವೆಂಕಟೇಶ್ವರ ಬಸ್ ಹಾಗೂ ಹೊನ್ನಾವಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಗುರುರಾಜ್ ಎಂಬ ಬಸ್ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, 5 ಜನ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. 15 ಜನರನ್ನು ನ್ಯಾಮತಿ ತಾಲೂಕಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಇನ್ನುಳಿದ ಜನರನ್ನು ಹೊನ್ನಾಳಿ ಹಾಗೂ ಶಿವಮೊಗ್ಗದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಿಲಿಂಡರ್ ಸ್ಪೋಟ – ಬೆಂಗಳೂರಿನ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ

Advertisements

ಘಟನೆಯ ಬಳಿಕ ನ್ಯಾಮತಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಡಿ.27 ರಂದು ಪರಿಹಾರ ವಿತರಣೆ

Advertisements
Advertisements
Exit mobile version