ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬಳಿ ಕೃಷ್ಣಾ ನದಿಯಲ್ಲಿ (Krishna River) ಸ್ನಾನಕ್ಕೆ ತೆರಳಿದ್ದ ಸಹೋದರರಿಬ್ಬರು (Brothers) ನೀರುಪಾಲಾಗಿದ್ದಾರೆ. ಕೊಪ್ಪರ ಗ್ರಾಮದ ರಜಾಕ್ ಮುಲ್ಲಾ ಉಸ್ಮಾನ್(35), ಮೌಲಾಲಿ ಉಸ್ಮಾನ್ (32) ನಾಪತ್ತೆಯಾದ ಸಹೋದರರು.
ನದಿಯಲ್ಲಿ ಸ್ನಾನ ಮಾಡುವ ವೇಳೆ ಬಾಲಕಿಯನ್ನು ಕಾಪಾಡಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ. ಸ್ನಾನ ಘಟ್ಟದಲ್ಲಿ ಮೆಟ್ಟಿಲುಗಳು ಇರುವ ಬಗ್ಗೆ ಮಾಹಿತಿಯಿಲ್ಲದೇ ಬಾಲಕಿಯನ್ನು ಕಾಪಾಡಲು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ. ಈಜು ಬಾರದ ಹಿನ್ನೆಲೆ ನೀರಿನ ಸೆಳೆತಕ್ಕೆ ಸಹೋದರರು ಕೊಚ್ಚಿಹೋಗಿದ್ದಾರೆ. ಸ್ಥಳೀಯರಿಗೆ ಬಾಲಕಿಯನ್ನು ಮಾತ್ರವೇ ರಕ್ಷಿಸಲು ಸಾಧ್ಯವಾಗಿದೆ.
Advertisement
Advertisement
ದೇವದುರ್ಗ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆದಿದ್ದು, ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರಿಸಲು ತಾಲೂಕು ಆಡಳಿತ ಚಿಂತನೆ ನಡೆಸಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನೀರು ಕೇಳುವ ನೆಪದಲ್ಲಿ ಚಾಕು ತೋರಿಸಿ ಕಬ್ಬಿಣದ ವಸ್ತುಗಳ ದರೋಡೆ
Advertisement
Advertisement
ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಸಹೋದರರು ಗ್ರಾಮದಲ್ಲಿ ನಡೆದ ಜಿಂದಾವಲಿ ಉರುಸ್‌ಗೆ ಬಂದಿದ್ದರು. 2 ದಿನಗಳಿಂದ ನದಿಯಲ್ಲೇ ಸ್ನಾನ ಮಾಡಿ ಉರುಸ್‌ನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇಂದು ಸ್ನಾನಕ್ಕೆ ತೆರಳಿದ್ದಾಗ ಅವಘಡ ನಡೆದಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲೂ ಇದೆ ಐಸಿಸ್ ಗ್ಯಾಂಗ್ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್