KarnatakaLatestLeading NewsMain PostShivamogga

ಶಿವಮೊಗ್ಗದಲ್ಲೂ ಇದೆ ಐಸಿಸ್‌ ಗ್ಯಾಂಗ್‌ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್

ಶಿವಮೊಗ್ಗ: (Shivamogga) ಜಿಲ್ಲೆಯಲ್ಲಿ ಐಸಿಸ್‌ (ISIS) ಗ್ಯಾಂಗ್‌ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಭಯೋತ್ಪಾದಕ (Terrorists) ಬಾಂಬ್‌ ಸ್ಫೋಟಿಸುವ ಗ್ಯಾಂಗ್‌ ಇದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಐಸಿಸ್ ಉಗ್ರರ ಜೊತೆ ಶಿವಮೊಗ್ಗ, ಮಂಗಳೂರು ಲಿಂಕ್ ಹೊಂದಿದೆ. ಇಲ್ಲಿ ಬಾಂಬ್‌ ಬ್ಲಾಸ್ಟ್‌ ಸೇರಿದಂತೆ ಉಗ್ರ ಚಟುವಟಿಕೆಗೆ ತರಬೇತಿ ನೀಡಲಾಗುತ್ತಿದೆ. ಐಸಿಎಸ್‌ ಜೊತೆ ನಿಕಟ ಸಂಪರ್ಕ ಹೊಂದಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಮನೆ ಕಾಯಲೆಂದು ಎರಡು ನಾಯಿ ಸಾಕಿದ್ರೂ ಹಾಡಹಗಲೇ ಕಳ್ಳತನ

ಮೂವರು ಶಂಕಿತ ಉಗ್ರರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸರ ಎಫ್‌ಐಆರ್ ದಾಖಲಿಸಿದ್ದಾರೆ. ತೀರ್ಥಹಳ್ಳಿಯ ಶಾರಿಖ್‌, ಮಂಗಳೂರಿನ ಮಾಜ್‌ ಮತ್ತು ಶಿವಮೊಗ್ಗದ ಸೈಯದ್‌ ಯಾಸಿನ್‌ ಬೈಲು ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಐಸಿಸ್‌ ಜೊತೆ ನಂಟು ಹೊಂದಿದ್ದ ಆರೋಪದಡಿ ಈಗಾಗಲೇ ಯಾಸಿನ್‌ ಎಂಬಾತನನ್ನು ಬಂಧಿಸಲಾಗಿದೆ. ಶಿವಮೊಗ್ಗದ ನಿವಾಸಿಯಾಗಿರುವ ಯಾಸಿನ್‌ ಎಲೆಕ್ಟ್ರಾನಿಕ್‌ ಇಂಜಿನಿಯರ್‌ ಆಗಿದ್ದಾನೆ. ಅಲ್ಲದೇ ಬಾಂಬ್‌ ತಯಾರಿಕೆಗೆ ತರಬೇತಿ ಕೊಡುತ್ತಿದ್ದ. ಇದನ್ನೂ ಓದಿ: ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

ಐಸಿಸ್‌ ಉಗ್ರರ ಜೊತೆ ನೇರ ಸಂಪರ್ಕ ಹೊಂದಿದ್ದಾರೆಂದು ಯಾಸಿನ್‌ ಕುರಿತು ಯುಎಪಿಎ ಕೇಸ್‌ ದಾಖಲಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈಗ ಪ್ರವೆನ್ಷನ್ ಆಫ್ ಇನ್ಸಲ್ಟ್ ಟು ನ್ಯಾಷನಲ್ ಹಾನರ್ ಆ್ಯಕ್ಟ್ – ಕಲಂ 2 ರಡಿ ಶಂಕಿತ ಉಗ್ರರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

Live Tv

Leave a Reply

Your email address will not be published.

Back to top button