BelgaumDistrictsKarnatakaLatestMain Post

ಮನೆ ಕಾಯಲೆಂದು ಎರಡು ನಾಯಿ ಸಾಕಿದ್ರೂ ಹಾಡಹಗಲೇ ಕಳ್ಳತನ

ಚಿಕ್ಕೋಡಿ: ಮನೆ ಕಾಯಲೆಂದು ಎರಡು ನಾಯಿ ಸಾಕಿದ್ದರೂ ಸಹ ಹಾಡಹಗಲೇ ಮನೆ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ನಡೆದಿದೆ.

ನಾಲ್ಕು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ (Robbery) ಮಾಡಲಾಗಿದೆ. ಕೋರೆ ನಗರದ ರಂಜಿತ್ ಶಿಂಧೆ (Ranjit Shinde) ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದು, ಮನೆಯಲ್ಲಿದ್ದ 12 ತೊಲೆ ಬಂಗಾರ, 60 ಸಾವಿರ ನಗದು ಕದ್ದು ಕಳ್ಳ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

ಮನೆ ಬಾಗಿಲಿಗೆ ಒಂದು ನಾಯಿ ಕಟ್ಟಿದ್ದ ಮಾಲೀಕ ರಂಜಿತ್ ಮನೆಯೊಳಗಿದ್ದ ಮತ್ತೊಂದು ನಾಯಿಯನ್ನು ಬಲೆಯಲ್ಲಿ ಹಾಕಿಕಟ್ಟಿದ್ದ. ಮನೆ ಕಾಯಲೆಂದೇ ಎರಡು ನಾಯಿ ಸಾಕಿದ್ದರೂ ಸಹ ಕಳ್ಳತನವಾಗಿದ್ದರ ಬಗ್ಗೆ ಮಾಲೀಕ ನೋವು ವ್ಯಕ್ತಪಡಿಸಿದ್ದಾರೆ. ಇದೀಗ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

Live Tv

Leave a Reply

Your email address will not be published. Required fields are marked *

Back to top button