ಚಿತ್ರದುರ್ಗ: ಕೇವಲ ಎರಡು ದಿನದ ಅಂತರದಲ್ಲಿ ಅಣ್ಣ-ತಮ್ಮ ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ಮಾನಂಗಿ ತಾಲೂಕು ಸಮೀಪದ ಕಳ್ಳಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ಪರಶುರಾಮಪ್ಪ(55) ಹಾಗೂ ವೆಂಕಟಪ್ಪ(60) ಮೃತ ಸಹೋದರರು. ಎರಡು ದಿನಗಳ ಹಿಂದೆ ಪರಶುರಾಮಪ್ಪ ಸಾವನ್ನಪ್ಪಿದ್ದರು. ಆದರೆ ಗುರುವಾರ ರಾತ್ರಿ ಅಣ್ಣ ವೆಂಕಟಪ್ಪ ಕೂಡ ಸಾವನ್ನಪ್ಪಿದ್ದಾರೆ. ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ದೂರು ನೀಡಿದ್ರೂ ಕ್ರಮ ಕೈಗೊಳ್ಳದ ಪೊಲೀಸರು ಮತ್ತು ಅಬಕಾರಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಎಗ್ಗಿಲ್ಲದೆ ನಕಲಿ ಮದ್ಯ ಮಾರಾಟ ನಡೆಯುತ್ತಿದೆ. ನಕಲಿ ಮದ್ಯ ಮಾರಾಟ ತಡೆಯುವಂತೆ ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.