ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಸಂಪ್ ಗೆ ಬಿದ್ದಿದ್ದ 5 ವರ್ಷದ ಬಾಲಕಿಯನ್ನ 6 ವರ್ಷದ ಇಬ್ಬರು ಬಾಲಕರು ಸೇರಿ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರವಿಪ್ರಸಾದ್ ಅನಿತಾ ದಂಪತಿಯ ಪುತ್ರಿ ಪೂರ್ವಿಕಾ ಆಕಸ್ಮಿಕ ಸಂಪಿಗೆ ಬಿದ್ದಿದ್ದಳು. ಈ ವೇಳೆ 6 ವರ್ಷದ ಸಾತ್ವಿಕ್ ಹಾಗೂ ದೀಪಕ್ ಸಂಪಿನಿಂದ ಆಕೆಯನ್ನು ಮೇಲೆ ಎಳೆದು ರಕ್ಷಣೆ ಮಾಡಿದ್ದಾರೆ. ಗಣೇಶಪ್ಪ ಅವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ಮೂವರು ಕೂಡ ಆಟ ಆಡಲು ಕಾಲು ದಾರಿ ಮೂಲಕ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೂರ್ವಿಕಾ ಕಾಲು ಜಾರಿ ಆಕಸ್ಮಿಕ ಸಂಪಿಗೆ ಬಿದ್ದಿದ್ದಳು. ತಕ್ಷಣ ದೀಪಕ್ ಕಿರುಚಿಕೊಂಡು ಅಕ್ಕ ಪಕ್ಕದವರನ್ನ ಕೂಗಿದ್ದಾನೆ. ಅಷ್ಟರಲ್ಲೇ ಸಾತ್ವಿಕ್ ಪೂರ್ವಿಕಾಳ ಕೈ ಹಿಡಿದು ಮೇಲೆಳಿದಿದ್ದಾನೆ.
Advertisement
ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಸಂಪಿನಲ್ಲಿದ್ದ ಗಲೀಜು ನೀರು ಕುಡಿದು ಅರೆ ಪ್ರಜ್ಞಾವಸ್ಥೆಗೆ ಜಾರಿದ್ದ ಪೂರ್ವಿಕಾ ಕೂಡ ಸದ್ಯ ಚೇತರಿಸಿಕೊಂಡಿದ್ದಾಳೆ. ಈ ಸಂಬಂಧ ಸಂಪು ಮುಚ್ಚುವಂತೆ ಪಂಚಾಯತಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement