ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಹಿನ್ನೆಲೆಯಲ್ಲಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು (Boys) ಸಾವನ್ನಪ್ಪಿದ್ದಾರೆ.
ಒಂದೇ ಮನೆಯ ಅಣ್ಣ-ತಮ್ಮಂದಿರ ಮಕ್ಕಳಾದ ಅಜಯ್ (8) ಹಾಗೂ ಯಲ್ಲಾಲಿಂಗ (6) ಭಾನುವಾರ ಸಂಜೆ ವೇಳೆ ಆಟವಾಡಲು ಹೋದಾಗ ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಹಿನ್ನೆಲೆ ತೋಡಿದ್ದ ಗುಂಡಿಯನ್ನು ಎರಡ್ಮೂರು ತಿಂಗಳಾಗಿದ್ರೂ ಮುಚ್ಚಿರಲಿಲ್ಲ. ಕುಡಿಯುವ ನೀರಿನ ಪೈಪುಗಳು ಒಡೆದು ಪ್ರತಿದಿನ ಪೋಲಾಗುತ್ತಿದ್ದ ನೀರು (Water) ಗುಂಡಿಯಲ್ಲಿ ತುಂಬಿತ್ತು.
Advertisement
Advertisement
ಶಾಲೆಯ ಪಕ್ಕದಲ್ಲೇ ಈ ಗುಂಡಿಯಿದ್ದು, ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ಗುಂಡಿ ಇರೋದನ್ನು ಗಮನಿಸದೇ ಕಾಲು ಜಾರಿ ಬಿದ್ದಿದ್ದಾರೆ. ಸುಮಾರು 32 ಅಡಿ ಉದ್ದ, 6 ಅಡಿ ಅಗಲದ ಗುಂಡಿಯಾಗಿದ್ದರಿಂದ ಬಾಲಕರು ಹೊರಬರಲು ಆಗದೇ ಜೀವ ತೊರೆದಿದ್ದಾರೆ. ಆಟವಾಡಲು ಹೋದ ಮಕ್ಕಳು ರಾತ್ರಿಯಾದ್ರೂ ಮನೆಗೆ ಬಾರದ ಹಿನ್ನೆಲೆ ಇಡೀ ಗ್ರಾಮಸ್ಥರು ಹುಟುಕಾಟ ನಡೆಸಿದ್ದಾರೆ. ಮಕ್ಕಳು ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ
Advertisement
Advertisement
ಗ್ರಾಪಂ ಅಧಿಕಾರಿಗಳು, ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯದಿಂದ ಒಂದೆಡೆ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹಲವು ದಿನಗಳಾದರೂ ರಿಪೇರಿಯಾಗಿರಲಿಲ್ಲ. ಇನ್ನೊಂದೆಡೆ ಕಾಮಗಾರಿಯನ್ನೂ ಮಾಡದೇ ಚರಂಡಿಗಾಗಿ ತೋಡಿದ್ದ ಗುಂಡಿಯನ್ನು ತಿಂಗಳುಗಟ್ಟೆ ಹಾಗೆಯೆ ಬಿಟ್ಟಿದ್ದು ಈ ಅವಘಡಕ್ಕೆ ಕಾರಣವಾಗಿದೆ. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಬಾಲಕರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k