ಕಾಂಪೌಂಡಿನಲ್ಲಿದ್ದ ಬೈಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: 1.60 ಲಕ್ಷ ಮೌಲ್ಯದ ಎರಡು ಬೈಕ್ ಬೆಂಕಿಗಾಹುತಿ!

1 Min Read

ರಾಯಚೂರು: ನಗರದ ಟೆಲಿಕಾಂ ಕಾಲೋನಿಯ ಮನೆಯ ಕಾಂಪೌಡಿನಲ್ಲಿದ್ದ ಬೈಕುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾರೆ.

ಟೆಲಿಕಾಂ ಕಾಲೋನಿ ನಿವಾಸಿ ಅಬ್ದುಲ್ ಮಜೀದ್ ಎಂಬವರಿಗೆ ಸೇರಿದ್ದ ಎರಡು ಬೈಕ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆಯ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಬೈಕ್‍ಗಳಿಗೆ ಶನಿವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಂಚಿದ್ದಾರೆ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಎರಡೂ ಬೈಕುಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ.

ಸುಮಾರು 1.60 ಲಕ್ಷ ರೂಪಾಯಿ ಮೌಲ್ಯದ ಟಿವಿಎಸ್‍ನ ಅಪಾಚಿ ಹಾಗೂ ಹೋಂಡಾದ ಸ್ಟನ್ನರ್ ಬೈಕುಗಳು ಸುಟ್ಟುಹೋಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *