ರಾಯಚೂರು: 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ರಾಯಚೂರು (Raichuru) ಜಿಲ್ಲೆಯ ಇಬ್ಬರು ಸಾಧಕರು ಭಾಜನರಾಗಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಿ ಕಲಾವಿದೆಯಾಗಿರುವ ಡಿ.ರತ್ನಮ್ಮ ದೇಸಾಯಿ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ಜಾಫರ್ ಮೊಹಿನುದ್ದೀನ್ ರಾಜ್ಯೋತ್ಸವ ಪ್ರಶಸ್ತಿಗೆ (Rajyostava Award) ಆಯ್ಕೆಯಾಗಿದ್ದಾರೆ.
50 ವರ್ಷಗಳಿಂದ ವೃತ್ತಿರಂಗಭೂಮಿ, ನಾಟಕ ಕಂಪನಿಗಳಲ್ಲಿ ಹಾಸ್ಯ ಪಾತ್ರ, ನಾಯಕಿ ಪಾತ್ರಗಳನ್ನು ಮಾಡಿ ಕಲಾಸೇವೆ ಸಲ್ಲಿಸಿದ್ದಾರೆ. ದುತ್ತರಗಿ ನಾಟಕ ಕಂಪನಿ, ಮಾಲತಿ ಸುಧೀರ್ ನಾಟಕ ಕಂಪನಿ, ಗುಬ್ಬಿ ವೀರಣ್ಣ ನಾಟಕ ಕಂಪನಿ, ಗುಮ್ಮಗೇರಿ ನಾಟಕ ಕಂಪನಿ ಸೇರಿ ಹಲವಾರು ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಇದನ್ನೂ ಓದಿ:2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್ ರಾಜ್ ಸೇರಿ 70 ಸಾಧಕರಿಗೆ ಗೌರವ
ಇನ್ನೂ ಜಾಫರ್ ಮೊಹಿನುದ್ದೀನ್ ವೃತ್ತಿಪರ ವಾಸ್ತುಶಿಲ್ಪಿ, ರಂಗಭೂಮಿ, ಸಿನಿಮಾ ಮತ್ತು ಧ್ವನಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಉರ್ದು ಮತ್ತು ಹಿಂದಿಯಲ್ಲಿ ಹಲವಾರು ನಾಟಕಗಳನ್ನು ಬರೆದು, ನಟಿಸಿ ನಿರ್ದೇಶಿಸಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಸಮುದಾಯ, ಬೆಂಗಳೂರು ಲಿಟಲ್ ಥಿಯೇಟರ್ ಮತ್ತು ಇನ್ನೂ ಅನೇಕ ಪ್ರಸಿದ್ಧ ನಾಟಕ ತಂಡಗಳೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಈ ಇಬ್ಬರು ಕಲಾವಿದರ ಸೇವೆಯನ್ನು ಗುರುತಿಸಿ, ರಾಜ್ಯ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

