ಉಡುಪಿ: ಕೆನರಾ ಬ್ಯಾಂಕ್ ಎಟಿಎಂ ಬಾಕ್ಸ್ ಕಳ್ಳತನಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.12 ರಂದು ಉಡುಪಿಯಲ್ಲಿ ಕೃತ್ಯ ನಡೆದಿತ್ತು. ಮಂಗಳೂರಿನ ಅಸೈಗೋಳಿ ಮತ್ತು ಪಡೀಲ್‌ನ ನಿವಾಸಿಗಳಾದ ಅಬೂಬಕ್ಕರ್ ಸಿದ್ದಿಕ್ (24), ಮೊಹಮ್ಮದ್ ಯಾಸೀನ್ (21) ಅರೆಸ್ಟ್ ಆಗಿದ್ದಾರೆ.
Advertisement
ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಕೂಟಿ, ಕತ್ತಿ, ಸುತ್ತಿಗೆ ಮೊದಲಾದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
Advertisement
ಉಡುಪಿ ಜಿಲ್ಲೆ ಕಾಪು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.