ಸಾಮಾಜಿಕ ಜಾಲತಾಣದಲ್ಲಿ ಶಿವಾಜಿಗೆ ಅಪಮಾನ – ಧಾರವಾಡದ ಇಬ್ಬರು ಅರೆಸ್ಟ್‌

Public TV
1 Min Read
Two arrested from Dharawad for derogatory post on Chhatrapati Shivaji

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ (Social Media) ಛತ್ರಪತಿ ಶಿವಾಜಿ ಮಹಾರಾಜರಿಗೆ (Chhatrapati Shivaji Maharaj) ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಧಾರವಾಡ (Dharawada) ಜಿಲ್ಲೆಯ ಕಲಘಟಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದ ಅಶ್ಪಕ್ ಹಾಗೂ ಶೌಖಲ್ ಅಲಿ ಬಂಧಿತ ಆರೋಪಿಗಳು. ಇವರಿಬ್ಬರು ಟಿಪ್ಪು ಸುಲ್ತಾನ್ (Tipu Sultan) ಕಾಲಿನಡಿ ಕುಳಿತು ಶಿವಾಜಿ ಬೇಡಿಕೊಳ್ಳುವ ಹಾಗೆ ಫೊಟೋವನ್ನು ಎಡಿಟ್ ಮಾಡಿ, ಆ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.  ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ಗೆ ಆಹ್ವಾನ – ಆಹ್ವಾನಿಸಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕೈ ಶಾಸಕ

ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಕಲಘಟಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅಶ್ಫಕ್‌ ಹಾಗೂ ಶೌಖತ್ ಅಲಿಯನ್ನು ಬಂಧಿಸಿದ್ದಾರೆ.

 

Share This Article