ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ತಂದೆ ಖ್ಯಾತ ಬರಹಗಾರ ಸಲೀಂ ಖಾನ್‌ಗೆ (Salim Khan) ಜೀವ ಬೆದರಿಕೆ ಹಾಕಲಾಗಿದೆ. ಎಂದಿನಂತೆ ಮುಂಬೈನ ಬಾಂದ್ರಾದ ಬೆಳಗ್ಗಿನ ವಾಕಿಂಗ್‌ಗೆ ತೆರಳುತ್ತಿದ್ದಾಗ ಅಪರಿಚಿತರಿಬ್ಬರು ಸಲೀಂ ಖಾನ್‌ಗೆ ಬೆದರಿಕೆ ಪತ್ರ ನೀಡಿದ್ದು, ಇದೀಗ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:‘ವೆಟ್ಟೈಯಾನ್’ಗೆ ಪೈಪೋಟಿ ಕೊಡಲ್ಲ- ‘ಕಂಗುವ’ ಪೋಸ್ಟ್‌ಪೋನ್..!
ಸೆ.19ರಂದು ವಾಕಿಂಗ್ ತೆರಳುತ್ತಿದ್ದಾಗ ಓರ್ವ ಮತ್ತು ಬುರ್ಖಾ ಧರಿಸಿದ ಮಹಿಳೆಯೊಬ್ಬರು ಬೆದರಿಕೆ ಪತ್ರ ನೀಡಿದ್ದಾರೆ. ‘ಲಾರೆನ್ಸ್ ಬಿಷ್ಣೋಯ್‌ರನ್ನು (Lawrence Bishnoi) ಕಳುಹಿಸಬೇಕೇ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಕೂಡಲೇ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಬೆದರಿಕೆ ಪತ್ರ ನೀಡಿದ್ದ ಇಬ್ಬರನ್ನು ಮುಂಬೈ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಕುಟುಂಬಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇನ್ನೂ ಕೆಲ ತಿಂಗಳುಗಳ ಹಿಂದೆ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆಸಲಾಗಿತ್ತು. ಗುಂಡಿನ ದಾಳಿ ನಡೆಸಿದ ಇಬ್ಬರೂ ಯುವಕರು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ವಿಚಾರಣೆ ಕೂಡ ನಡೆಯುತ್ತಿದೆ.
ಇನ್ನೂ 1998ರಲ್ಲಿ ಸಲ್ಮಾನ್ ಖಾನ್ ಅವರು ಶೂಟಿಂಗ್ ಹೋದ ಸಂದರ್ಭದಲ್ಲಿ ಕೃಷ್ಣ ಮೃಗವನ್ನು ಹತ್ಯೆ ಮಾಡಿದ್ದರು. ಕೃಷ್ಣ ಮೃಗವನ್ನು ಬಿಷ್ಣೋಯ್ ಸಮುದಾಯವರು ದೇವರಂತೆ ಕಾಣುತ್ತಾರೆ. ಇದನ್ನು ಹತ್ಯೆ ಮಾಡಿರುವುದರಿಂದ ಸಲ್ಲು ವಿರುದ್ಧ ದ್ವೇಷ ತೀರಿಸಿಕೊಳ್ಳಲು ಬಿಷ್ಣೋಯ್ ಗ್ಯಾಂಗ್ ಇದೀಗ ಮುಂದಾಗಿದೆ.