ಮುಂಬೈ: ಮಹಾರಾಷ್ಟ್ರದ ವಿದರ್ಭ ಕ್ರೀಡಾಂಗಣದಲ್ಲಿ ಆಸೀಸ್ ವಿರುದ್ಧ 2ನೇ ಏಕದಿನ ಕ್ರಿಕೆಟ್ ಪಂದ್ಯ ನಾಳೆ ನಡೆಯಲಿದ್ದು, ಟೀಂ ಇಂಡಿಯಾ ಮೊದಲ ಪಂದ್ಯದ ಗೆಲುವಿನ ನಡುವೆಯೂ ಅನುಭವಿಸಿದ ವೈಫಲ್ಯಗಳನ್ನು ತಿದ್ದಿಕೊಳ್ಳುವ ತಯಾರಿ ನಡೆಸಿದೆ.
ಟಿ20 ಸರಣಿ ಸೋತು ಮುಖಭಂಗ ಅನುಭವಿಸಿದ್ದ ವಿರಾಟ್ ಕೊಹ್ಲಿ ಬಳಗಕ್ಕೆ ಮೊದಲ ಏಕದಿನ ಗೆಲುವು ವಿಶ್ವಾಸವನ್ನು ತುಂಬಿದೆ. ಆದರೆ ಪಂದ್ಯದಲ್ಲಿ ಆರಂಭಿಕ ಧವನ್ ಕೈಕೊಟ್ಟ ಪರಿಣಾಮದಿಂದ ಟೀಂ ಇಂಡಿಯಾ ಪ್ರಯಾಸದ ಗೆಲುವು ಪಡೆದಿತ್ತು. ಟಿ20 ಸರಣಿಯಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಕೂಡ ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ಲಭಿಸಿರಲಿಲ್ಲ. ಸದ್ಯ ರಾಹುಲ್ ಉತ್ತಮ ಫಾರ್ಮ್ ಗೆ ಮರಳಿದ್ದು, ವಿಶ್ವಕಪ್‍ಗೂ ಮುನ್ನ ಹೆಚ್ಚಿನ ಅವಕಾಶಗಳನ್ನು ನೀಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಶೂನ್ಯಕ್ಕೆ ಔಟಾಗುವ ಮೂಲಕ ಧವನ್ ನಿರಾಸೆ ಮೂಡಿಸಿದ್ದ ಪರಿಣಾಮ ಉತ್ತಮ ಫಾರ್ಮ್ ಹೊಂದಿರುವ ರಾಹುಲ್‍ಗೆ ಚಾನ್ಸ್ ನೀಡಿ ಎನ್ನುತ್ತಿದ್ದಾರೆ ಅಭಿಮಾನಿಗಳು.
Advertisement
How good does @ImRo45 look at the nets on the eve of the 2nd ODI in Nagpur #TeamIndia #INDvAUS @paytm pic.twitter.com/Hgn6H8gfPR
— BCCI (@BCCI) March 4, 2019
Advertisement
ದೇಶಿಯ ಕ್ರಿಕೆಟ್ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿದ್ದ ರಾಹುಲ್, ಮೊದಲ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದರು. ಅಲ್ಲದೇ 2ನೇ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಆದರೆ ಧವನ್ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರೂ ಕೂಡ ಮತ್ತೊಂದು ಚಾನ್ಸ್ ಪಡೆಯುತ್ತರಾ ಎಂಬುವುದು ಕುತೂಹಲ ಮೂಡಿಸಿದೆ.
Advertisement
ಬ್ಯಾಟಿಂಗ್‍ನಲ್ಲಿ ಆರಂಭಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಂಬಟಿ ರಾಯುಡು ಅವರು ಹೆಚ್ಚಿನ ಜವಾಬ್ದಾರಿ ಹೊಂದಿದ್ದು, ಮೊದಲ ಪಂದ್ಯದ ಗೆಲುವಿನ ಜೋಡಿಯಾಗಿದ್ದ ಧೋನಿ ಹಾಗೂ ಕೇದಾರ್ ಜಾಧವ್ ಮೇಲೆ ಎಲ್ಲರ ಕಣ್ಣಿದೆ. ಬೌಲಿಂಗ್ ನಲ್ಲಿ ಬುಮ್ರಾ ಹಾಗೂ ಶಮಿ ಮಿಂಚುವುದು ಅನಿವಾರ್ಯವಾಗಿದ್ದು, ಕುಲ್‍ದೀಪ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರ ನಡುವೆ 2ನೇ ಪಂದ್ಯದಲ್ಲಿ ರವೀಂದ್ರ ಜಡೇಜಾ ಸ್ಥಾನ ಉಳುಸಿಕೊಳ್ಳುತ್ತಾರ ಅಥವಾ ಚಹಲ್ ಅವಕಾಶ ಪಡೆದುಕೊಳ್ತಾರ ನೋಡಬೇಕಿದೆ.
Advertisement
Give Chance KL Rahul 2nd one day
— Anand S k (@AnandSk17024360) March 3, 2019
What gearing up for the 2nd ODI against Australia looks like ???????????? #INDvAUS pic.twitter.com/tVOe1g1mLp
— BCCI (@BCCI) March 4, 2019
https://twitter.com/mrShl12/status/1101916666860994567?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv