ನವದೆಹಲಿ: ಟ್ವಿಟ್ಟರ್ ಬಳಕೆದಾರರೊಬ್ಬರು ನೀವು ಎನ್‍ಆರ್‌ಐ ಎಂದು ಪ್ರಶ್ನಿಸಿದ್ದಕ್ಕೆ ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಾವು ಹೆಚ್‍ಆರ್‌ಐ ಎಂದು ಉತ್ತರಿಸುವ ಮೂಲಕ ಭಾರತೀಯರ ಮನಗೆದ್ದಿದ್ದಾರೆ.
ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಸಾಕಷ್ಟು ಜನಪ್ರಿಯ ಕೈಗಾರಿಕೋದ್ಯಮಿಯಾಗಿದ್ದಾರೆ. ಇವರು ಟ್ವಿಟ್ಟರ್‌ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದು, ನೆಟ್ಟಿಗರು ಕೇಳುವ ಪ್ರಶ್ನೆಗೆ ಆಗಾಗ ಉತ್ತರಿಸುತ್ತಿರುತ್ತಾರೆ. ಇದೇ ರೀತಿ ಇದೀಗ ಮತ್ತೊಮ್ಮೆ ಸುದ್ದಿ ಆಗಿದ್ದಾರೆ.
Advertisement
Manhattan 4th of July Skyline. (1/3) pic.twitter.com/USnmmULw4a
— anand mahindra (@anandmahindra) July 5, 2022
ವಾಸ್ತವವಾಗಿ ನ್ಯೂಯಾರ್ಕ್‍ನಲ್ಲಿ ಆನಂದ್ ಮಹೀಂದ್ರಾ ಅವರ ಕುಟುಂಬ ವಾಸಿಸುತ್ತಿದೆ. ಅವರನ್ನು ಭೇಟಿ ಮಾಡಲು ನ್ಯೂಯಾರ್ಕ್‍ಗೆ ಹೋಗಿದ್ದಾಗ ತೆಗೆದ ಕೆಲವಷ್ಟು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Advertisement
Just visiting family in New York. So am an HRI. Heart (always) resident in India….???? https://t.co/ydzwTux9vr
— anand mahindra (@anandmahindra) July 5, 2022
ಈ ಫೋಟೋಕ್ಕೆ ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, ನೀವು ಎನ್‍ಆರ್‌ಐ ಎಂದು ಪ್ರಶ್ನಿಸಿದ್ದರು. ಇದಕ್ಕೆ ಆನಂದ್ ಮಹೀಂದ್ರಾ ಅವರು ತಾವು ಹೆಚ್‍ಆರ್‌ಐ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್‍ಆರ್‌ಐ ಎಂದರೆ ಹಾರ್ಟ್ ರೆಸಿಡೆಂಟ್ ಇನ್ ಇಂಡಿಯಾ(ಯಾವಾಗಲೂ ಭಾರತದಲ್ಲೇ ವಾಸಿಸುತ್ತೇನೆ) ಎನ್ನುವ ಅರ್ಥವನ್ನು ತಿಳಿಸಿದ್ದಾರೆ. ಇದನ್ನೂ ಓದಿ: 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ
Advertisement
Advertisement
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಈ ಪೋಸ್ಟ್‌ನ್ನು 37 ಸಾವಿರ ಜನರು ಇಷ್ಟಪಟ್ಟಿದ್ದಾರೆ. ಹಾಗೆಯೇ ಇದಕ್ಕೆ 260ಕ್ಕೂ ಅಧಿಕ ಪ್ರತ್ಯುತ್ತರಗಳು ಬಂದಿವೆ. ಇದನ್ನೂ ಓದಿ: ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ