InternationalLatestLeading NewsMain Post
ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

Advertisements
ದುಬೈ: ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ತೈಲ ಬೆಲೆ ಭಾರೀ ಕುಸಿತ ಕಂಡಿದೆ. 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 100 ಡಾಲರ್(7,900 ರೂ.)ಗಿಂತಲೂ ಕಡಿಮೆಯಾಗಿದೆ.
1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 94 ಸೆಂಟ್ ಅಥವಾ ಶೇ.0.9 ರಷ್ಟು ಕುಸಿದು 99.75 ಡಾಲರ್ ತಲುಪಿದೆ. ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೆಟ್ ಕಚ್ಚಾ ತೈಲದ ಬೆಲೆ ಶೇ.9 ರಷ್ಟು ಕುಸಿದು 97.91 ಡಾಲರ್(7,700 ರೂ.) ತಲುಪಿದೆ.1988 ರಲ್ಲಿ ವ್ಯಾಪಾರ ಪ್ರಾರಂಭವಾದಾಗಿನಿಂದ ಕಂಡ 3ನೇ ಅತಿ ದೊಡ್ಡ ಕುಸಿತವಾಗಿದೆ. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು
ಪ್ರಪಂಚದಾದ್ಯಂತ ಹಣದುಬ್ಬರ ಸಮಸ್ಯೆ ಎದುರಾಗುತ್ತಿದ್ದು ಆರ್‌ಬಿಐ ಸೇರಿದಂತೆ ವಿಶ್ವದ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಲೋಹ, ತಾಳೆ ಎಣ್ಣೆ, ಇತರ ಸರಕುಗಳೊಂದಿಗೆ ಕಚ್ಚಾತೈಲದ ಬೆಲೆಯೂ ಕುಸಿತವಾಗಿದೆ. ಇದನ್ನೂ ಓದಿ: ಒಂದು ವಾರದೊಳಗೆ ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ