ವಾಷಿಂಗ್ಟನ್: ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ಮುಖ್ಯಸ್ಥ, ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ತೆಕ್ಕೆಗೆ ಟ್ವಿಟ್ಟರ್ ಕಂಪನಿ ಬೀಳುವುದು ಬಹುತೇಕ ಖಚಿತವಾಗಿದೆ.
ಶೇ.9 ರಷ್ಟು ಷೇರು ಖರೀದಿಸಿದ ಬಳಿಕ ಮಸ್ಕ್ ಈಗ ಟ್ವಿಟ್ಟರ್‌ನ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಮಸ್ಕ್ ಮೈಕ್ರೋಬ್ಲಾಗಿಂಗ್ ಆಡಳಿತ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಬಳಿಕ 41 ಬಿಲಿಯನ್ ಡಾಲರ್‌ಗೆ(ಸುಮಾರು 3 ಲಕ್ಷ ಕೋಟಿ ರೂ.)ಟ್ವಿಟ್ಟರ್‌ನ ಶೇ.100 ಪಾಲನ್ನು ಖರೀದಿಸುತ್ತೇನೆ ಎಂದು ಆಫರ್ ನೀಡಿದ್ದರು.
Advertisement
I hope that even my worst critics remain on Twitter, because that is what free speech means
— Elon Musk (@elonmusk) April 25, 2022
Advertisement
ಟ್ವಿಟ್ಟರ್‌ನ ಪ್ರತಿ ಷೇರಿಗೆ 54.20 ಡಾಲರ್ (4,124.81 ರೂ.) ಕೊಡುವುದಾಗಿ ಎಲೋನ್ ಮಸ್ಕ್ ಷೇರುಪೇಟೆ ನಿಯಂತ್ರಣ ಮಂಡಳಿಗೆ ತಿಳಿಸಿದ್ದರು. ಈ ಪ್ರಸ್ತಾಪವನ್ನು ಟ್ವಿಟ್ಟರ್ ಬೋರ್ಡ್ ಒಪ್ಪಿಕೊಂಡಿದ್ದು ಷೇರು ಖರೀದಿ ಮಾತುಕತೆ ಕೊನೆಯ ಹಂತದಲ್ಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್?
Advertisement
Advertisement
ಭಾನುವಾರ ಮಸ್ಕ್ ತಂಡ ಟ್ವಿಟ್ಟರ್ ಆಡಳಿತ ಮಂಡಳಿಯನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಈ ಮಾತುಕತೆಯಲ್ಲಿ ಮಸ್ಕ್ ಭಾಗಿಯಾಗಿದ್ದಾರಾ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.
ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸುತ್ತೇನೆ ಎಂದು ಘೋಷಣೆ ಮಾಡಿದ ಬಳಿಕ ಷೇರು ಮೌಲ್ಯ ಶೇ.9.2 ರಷ್ಟು ಏರಿಕೆಯಾಗಿದೆ. ಒಂದು ಷೇರಿಗೆ 39 ಡಾಲರ್(2,990 ರೂ.) ಮೌಲ್ಯ ಇದ್ದರೆ ಈಗ ಅದು 48.93 ಡಾಲರ್‌ಗೆ(3,754 ರೂ.) ಏರಿಕೆಯಾಗಿದೆ.
ಜನವರಿ 31 ರಿಂದ ಪ್ರತಿನಿತ್ಯ ಟ್ವಿಟ್ಟರ್ ಷೇರನ್ನು ಖರೀದಿಸಲು ಆರಂಭಿಸಿದ್ದ ಮಸ್ಕ್ ಏಪ್ರಿಲ್ 4 ರಂದು ನಾನು ಟ್ವಿಟ್ಟರ್ ಶೇ.9 ರಷ್ಟು ಷೇರನ್ನು ಖರೀದಿಸಿದ್ದೇನೆ ಎಂದು ಪ್ರಕಟಿಸಿದ್ದರು. ಏ.5 ರಂದು ಟ್ವಿಟ್ಟರ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನವನ್ನು ನೀಡುವುದಾಗಿ ಪ್ರಕಟಿಸಿತ್ತು. ಆದರೆ ಈ ಆಫರ್ ಅನ್ನು ಮಸ್ಕ್ ತಿರಸ್ಕರಿಸಿದ್ದರು.
ಮುಕ್ತ ಅಭಿವ್ಯಕ್ತಿಗೆ ಜಗತ್ತಿನ ಎಲ್ಲೆಡೆ ವೇದಿಕೆಯಾಗಬಲ್ಲ ಶಕ್ತಿ ಟ್ವಿಟ್ಟರ್‌ಗೆ ಇದೆ ಎಂಬ ನಂಬಿಕೆಯಿಂದ ನಾನು ಟ್ವಿಟ್ಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಆದರೆ ಈಗ ಇರುವ ಸ್ವರೂಪದಲ್ಲಿದ್ದಾರೆ ಈ ಉದ್ದೇಶ ಈಡೇರುವುದಿಲ್ಲ ಮತ್ತು ಬೆಳೆಯುವುದಿಲ್ಲ. ಹೀಗಾಗಿ ಟ್ವಿಟ್ಟರ್ ಅನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಕ್ಯಾಪಿಟಲ್ ಹಿಲ್ ಘಟನೆಯ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಗೆ ಟ್ವಿಟ್ಟರ್ ಸಂಪೂರ್ಣ ನಿಷೇಧ ಹೇರಿತ್ತು. ಈ ವಿಚಾರ ಚರ್ಚೆ ಆಗುತ್ತಿದ್ದಾಗ ಮಸ್ಕ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಹತ್ತಿಕ್ಕಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಯಶಸ್ವಿ ಉದ್ಯಮಿಯಾಗಿರುವ ಮಸ್ಕ್ ಟ್ವಿಟ್ಟರ್ ಅನ್ನು ದೊಡ್ಡ ಕಂಪನಿಯನ್ನಾಗಿ ಮಾಡಲು ಮುಂದಾಗಿದ್ದಾರೆ.