ಸ್ಯಾಂಡಲ್ವುಡ್ನ ಯುವರತ್ನ ಪುನೀತ್ ರಾಜ್ಕುಮಾರ್ ಅಗಲಿ 9 ತಿಂಗಳು ಕಳೆದಿದೆ. ಈ ವೇಳೆ ಟ್ವಿಟರ್ ವಿರುದ್ಧ ಅಪ್ಪು ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಅಪ್ಪು ನೆನಪಿನಲ್ಲಿರುವ ಅಭಿಮಾನಿಗಳಿಗೆ, ಟ್ವಿಟರ್ನ ನಡೆ ಬೇಸರ ಮೂಡಿಸಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ಗಳನ್ನ ಮಾತನಾಡಿಸಲು ಕೊಂಡಿ ಆಗಿರೋದೇ ಈ ಸೋಷಿಯಲ್ ಮೀಡಿಯಾ, ಸ್ಟಾರ್ಗಳ ಅಕೌಂಟ್ನ ಕಿಡಿಗೇಡಿಗಳು ನಕಲು ಮಾಡಬಾರದು ಎಂಬ ಕಾರಣದಿಂದ ನಟ ನಟಿಯರ ಖಾತೆಗೆ ನೀಲಿ ಟಿಕ್ ಅನ್ನು ನೀಡಿರುತ್ತಾರೆ. ಹೀಗಿರುವಾಗ ಟ್ವಿಟರ್ನಲ್ಲಿರುವ ಪುನೀತ್ ಖಾತೆಯ ನೀಲಿ ಟಿಕ್ ಅನ್ನು ಟ್ವಿಟರ್ ಸಂಸ್ಥೆ ತೆಗೆದು ಹಾಕಿದ್ದು, ಈ ನಡೆ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪುನೀತ್ ಹೆಸರಿನಲ್ಲಿ ಒಂದಲ್ಲಾ ಒಂದು ಉತ್ತಮ ಕೆಲಸ ಮಾಡುತ್ತಲೇ ಬಂದಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಈ ವೇಳೆ ಬೇಸರ ಆಗುವಂತಹ ಸಂಗತಿಯೊಂದು ಎದುರಾಗಿದೆ. ಇಷ್ಟು ದಿನ ಪುನೀತ್ ಟ್ವಿಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಈಗ ಮಾಯವಾಗಿದೆ. ಟ್ವಿಟರ್ನ ಈ ನಡೆ ನೋಡಿ ಅಪ್ಪು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಲೇಡಿ ಸೂಪರ್ ಸ್ಟಾರ್ ನಯನತಾರಾ 75ನೇ ಸಿನಿಮಾ ಅನೌನ್ಸ್
Blue tick gone. Hurts???????????? https://t.co/vhjdtrT1QU
— Puneeth Rajkumar Trends™ (@PRK_TrendsOffl) July 12, 2022
ನಟ ಪುನೀತ್ ರಾಜ್ಕುಮಾರ್ ಖಾತೆಯಿಂದ ನೀಲಿ ಟಿಕ್ ತೆಗೆಯಲು ಕಾರಣವಿದೆ. 8 ತಿಂಗಳಿಂದ ಅವರ ಖಾತೆ ಆಕ್ಟೀವ್ ಆಗಿಲ್ಲ ಎಂಬ ಕಾರಣಕ್ಕೆ ನೀಲ್ ಟಿಕ್ ಅನ್ನು ತೆಗೆದು ಹಾಕಲಾಗಿದೆ. ಈ ವೇಳೆ ಟ್ವಿಟರ್ ವಿರುದ್ಧ ಅಪ್ಪು ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ನಟ ಸಿದ್ಧಾರ್ಥ್ ಶುಕ್ಲಾ ಅವರ ಟ್ವಿಟರ್ ಖಾತೆಯ ನೀಲಿ ಟಿಕ್ ಇನ್ನೂ ಹಾಗೆ ಇದೆ. ಆದರೆ ಅಪ್ಪು ಖಾತೆಯ ನೀಲಿ ಟಿಕ್ ತೆಗೆದಿದ್ದು, ಯಾಕೆ ಅಂತಾ ಫ್ಯಾನ್ಸ್ ಟ್ವಿಟರ್ ವಿರುದ್ಧ ಫುಲ್ ಗರಂ ಆಗಿದ್ದಾರೆ.
Live Tv
[brid partner=56869869 player=32851 video=960834 autoplay=true]