ಬೆಂಗಳೂರು: ಆಡುವುದು ಮೋಸದ ಪಗಡೆಯಾಟವಲ್ಲ, ಮಾಡುವುದಾದರೆ ಧರ್ಮ ಯುದ್ಧವನ್ನೇ ಮಾಡೋಣ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಪಂಪ್‍ವೆಲ್, ಮಂಗಳೂರು-ಮೂಡಬಿದಿರೆ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣ ಯಾರು ಎಂದು ಚರ್ಚೆ ಮಾಡದೇ ತಮ್ಮ ರಾಜಕೀಯ ವಾಂಛೆಗಳಿಗೋಸ್ಕರ ವಿರೋಧಿಸುವುದನ್ನು ನಿಲ್ಲಿಸಿ. ಕಳೆದ 10 ವರ್ಷಗಳಲ್ಲಿ ನಾನು ದಕ್ಷಿಣ ಕನ್ನಡಕ್ಕೆ ತಂದ 15,000 ಕೋಟಿ ಅನುದಾನದ ಬಗ್ಗೆ ಚರ್ಚೆ ಮಾಡೋಣ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
ಐವನ್ ಡಿ'ಸೋಜರೇ,
ನಾನು ಬಕೆಟ್ ಹಿಡಿದು ಹಿಂಬಾಗಿಲ ಮೂಲಕ ಅಧಿಕಾರ ಹಿಡಿದವನಲ್ಲ,
ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ನನ್ನನ್ನು ಎದುರಿಸಿ,
ಅದು ಬಿಟ್ಟು ನೀಚ ರಾಜಕಾರಣಕ್ಕೆ ಇಳಿದು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಸಿಕ್ಕ ಅಧಿಕಾರವನ್ನೂ ಕಳೆದುಕೊಳ್ಳಬೇಕಾದೀತು ಎಚ್ಚರಿಕೆ
— Nalinkumar Kateel (@nalinkateel) January 17, 2019
Advertisement
ಐವನ್ ಡಿ’ಸೋಜಾ ಅವರೇ, ನಾನು ಬಕೆಟ್ ಹಿಡಿದು ಹಿಂಬಾಗಿಲ ಮೂಲಕ ಅಧಿಕಾರ ಹಿಡಿದವನಲ್ಲ, ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ನನ್ನನ್ನು ಎದುರಿಸಿ. ಅದನ್ನು ಬಿಟ್ಟು ನೀಚ ರಾಜಕಾರಣಕ್ಕೆ ಇಳಿದು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಸಿಕ್ಕ ಅಧಿಕಾರವನ್ನೂ ಕಳೆದುಕೊಳ್ಳಬೇಕಾದೀತು ಎಚ್ಚರಿಕೆ ಎಂದು ಕಟೀಲು ಹೇಳಿದ್ದಾರೆ.
Advertisement
ಪಂಪ್‌ವೆಲ್, ಮಂಗಳೂರು-ಮೂಡಬಿದಿರೆ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣ ಯಾರು? ಎಂದು ಚರ್ಚೆ ಮಾಡದೆ
ತಮ್ಮ ರಾಜಕೀಯ ವಾಂಛೆಗಳಿಗೋಸ್ಕರ ವಿರೋಧಿಸುವುದನ್ನು ನಿಲ್ಲಿಸಿ
ಕಳೆದ 10 ವರ್ಷಗಳಲ್ಲಿ ನಾನು ದಕ್ಷಿಣ ಕನ್ನಡಕ್ಕೆ ತಂದ 15,000 ಕೋಟಿ ಅನುದಾನದ ಬಗ್ಗೆ ಚರ್ಚೆ ಮಾಡೋಣ
ಆಡುವುದು ಮೋಸದ ಪಗಡೆಯಾಟವಲ್ಲ, ಮಾಡುವುದಾದರೆ ಧರ್ಮ ಯುದ್ಧವನ್ನೇ ಮಾಡೋಣ
— Nalinkumar Kateel (@nalinkateel) January 17, 2019
Advertisement
9 ವರ್ಷ ಆದ್ರೂ ಪೂರ್ಣಗೊಂಡಿಲ್ಲ: ಕಾಸರಗೋಡು- ಉಡುಪಿ ಮಾರ್ಗದ ಪಂಪ್‍ವೆಲ್‍ನಲ್ಲಿ ಈ ಫ್ಲೈ ಓವರ್ 9 ವರ್ಷದಿಂದ ನಿರ್ಮಾಣವಾಗುತ್ತಿದ್ದು, 600 ಮೀ. ಉದ್ದ ಹಾಗೂ 20 ಮೀ. ಅಗಲವಿರಲಿದೆ. ನಂತೂರಿನಿಂದ ಬರುವಾಗ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ಫ್ಲೈ ಓವರ್ ನಿರ್ಮಾಣವಾಗಲಿದೆ.
Sir respect !Please elaborate on why the delay in pumpwell flyover work. Pls expose the culprits .u have a chance to justify
— Apartment Laws (@SS4u24x7) January 17, 2019
ಹಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಂಗಳೂರಿನ ಪಂಪ್‍ವೆಲ್ ಫ್ಲೈ ಓವರ್ ಕಾಮಗಾರಿ ಬಗ್ಗೆ ಅಣಕಿಸಿರುವ ವೀಡಿಯೋ/ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಈ ಫ್ಲೈ ಓವರ್ ಕಾಮಗಾರಿ ಆರಂಭವಾಗಿ ಬರೋಬ್ಬರಿ 9 ವರ್ಷಗಳು ಸಂದಿವೆ. ಇನ್ನೂ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಪೂರ್ಣಗೊಳ್ಳಲು ಇನ್ನು ಎಷ್ಟು ವರ್ಷಗಳು ಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಲೇ ಇದ್ದಾರೆ.
https://twitter.com/VKrishnaTweets/status/1085817031167856640
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv