ವಾಷಿಂಗ್ಟನ್: 3 ದಿನಗಳ ಹಿಂದಷ್ಟೇ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್‌ನ ಲೋಗೋವನ್ನು (Twitter Logo) ನೀಲಿ ಹಕ್ಕಿಯಿಂದ (Bird) ಬದಲಾಯಿಸಿ ನಾಯಿಯ (Dog) ಚಿತ್ರವನ್ನು ಇರಿಸಿದ್ದರು. ಮಸ್ಕ್‌ನ ಈ ಕ್ರಮ ಬಳಕೆದಾರರನ್ನು ಅಚ್ಚರಿಪಡಿಸಿದ್ದು ಮಾತ್ರವಲ್ಲದೇ ಭಾರೀ ಚರ್ಚೆಗೂ ಗ್ರಾಸವಾಗಿತ್ತು.
ನಾಯಿಯ ಲೋಗೋ ಟ್ವಿಟ್ಟರ್‌ನಲ್ಲಿ ಕೇವಲ ಕೆಲ ಗಂಟೆಗಳ ವರೆಗೆ ಮಾತ್ರವೇ ಇರಬಹುದು, ಶೀಘ್ರವೇ ಇದು ಮತ್ತೆ ಬದಲಾಗಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವಿಸಿದ್ದರು. ಆದರೆ ನಾಯಿಯ ಲೋಗೋವನ್ನು 3 ದಿನಗಳ ಕಾಲ ಹಾಗೇ ಇಡಲಾಗಿತ್ತು. ಇದೀಗ 3 ದಿನಗಳ ಬಳಿಕ ಟ್ವಿಟ್ಟರ್‌ನ ಲೋಗೋ ಮತ್ತೆ ನೀಲಿ ಹಕ್ಕಿಗೆ ಮರಳಿದೆ. ಇದನ್ನೂ ಓದಿ: Twitter logo: ಟ್ವಿಟ್ಟರ್ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!
Advertisement
Advertisement
ಟ್ವಿಟ್ಟರ್‌ನಲ್ಲಿ ನಾಯಿಯ ಲೋಗೋ ವೆಬ್ ಬಳಕೆದಾರರಿಗೆ ಮಾತ್ರವೇ ಕಂಡುಬಂದಿದೆ. ಆ್ಯಪ್ ಬಳಕೆದಾರರಿಗೆ ಟ್ವಿಟ್ಟರ್ ಲೋಗೋದಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಳ್ಳದೇ ಕೇವಲ ನೀಲಿ ಹಕ್ಕಿ ಮಾತ್ರವೇ ಕಾಣಿಸಿಕೊಂಡಿದೆ. ಆದರೆ ಮಸ್ಕ್ ಲೋಗೋವನ್ನು ಏಕೆ ಬದಲಾಯಿಸಿದ್ದರು ಎಂಬುದು ಇನ್ನು ಕೂಡಾ ಗೊಂದಲಗಳಿಗೆ ಕಾರಣವಾಗಿದೆ.
Advertisement
ವರದಿಗಳ ಪ್ರಕಾರ ಮಸ್ಕ್ ಟ್ವಿಟ್ಟರ್‌ನ ಲೋಗೋವನ್ನು ನಾಯಿಗೆ ಬದಲಾಯಿಸಿದ ಬಳಿಕ ಅದರ ಬಗ್ಗೆ ತಮಾಷೆ ಮಾಡಿದ್ದಾರೆ. ಅವರು ಟ್ವಿಟ್ಟರ್ ಖರೀದಿ ಮಾಡುವುದಕ್ಕೂ ಮೊದಲೊಮ್ಮೆ ಟ್ವೀಟ್ ಮಾಡಿದ ಒಂದು ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಟ್ವಿಟ್ಟರ್ ಅನ್ನು ಖರೀದಿಸಬೇಕು ಹಾಗೂ ಅದರ ಲೋಗೋವನ್ನು ನಾಯಿಗೆ ಬದಲಾಯಿಸಬೇಕು ಎಂದು ಬರೆದುಕೊಂಡಿದ್ದರು. ತಾವು ನೀಡಿದ ಭರವಸೆಯಂತೆ ಕಂಪನಿಯ ಲೋಗೋವನ್ನು ಬದಲಾಯಿಸಲಾಗಿದೆ ಎಂದು ಅವರು ತಮಾಷೆಯಾಡಿದ್ದಾರೆ. ಇದನ್ನೂ ಓದಿ: ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್