ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

Public TV
1 Min Read
Jack Dorsey

ವಾಷಿಂಗ್ಟನ್: ಟ್ವಿಟ್ಟರ್‌ನ (Twitter) ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡಾರ್ಸೆ (Jack Dorsey) ಮೈಕೋಬ್ಲಾಗಿಂಗ್ ಸೈಟ್‌ಗೆ ಪರ್ಯಾಯವಾಗಿ ಹೊಸ ಆ್ಯಪ್ ರಚನೆ ಮಾಡಿದ್ದು, ಇದೀಗ ಆ್ಯಪ್ ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿದೆ.

ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಮಾಜಿ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಉನ್ನತ ಅಧಿಕಾರಿಗಳನ್ನೇ ವಜಾಗೊಳಿಸಲಾಗಿದೆ. ಈ ಬದಲಾವಣೆಯ ನಡುವೆಯೇ ಡಾರ್ಸೆ ಟ್ವಿಟ್ಟರ್‌ಗೆ ಪರ್ಯಾಯವಾಗಿ ಬ್ಲೂಸ್ಕೈ (Bluesky) ಹೆಸರಿನ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು.

Bluesky

ವರದಿಗಳ ಪ್ರಕಾರ ಬ್ಲೂಸ್ಕೈ ಅಪ್ಲಿಕೇಶನ್ ಐಒಎಸ್‌ನ ಆ್ಯಪ್ ಸ್ಟೋರ್‌ನಲ್ಲಿ ಬೀಟಾ ಪರೀಕ್ಷೆಗಾಗಿ ಬಿಡುಗಡೆ ಮಾಡಲಾಗಿದೆ. ಇದು ಮೊದಲ ಬಾರಿ ಫೆಬ್ರವರಿ 17 ರಂದು ಆ್ಯಪ್ ಸ್ಟೋರ್‌ನಲ್ಲಿ ಕಾಣಿಸಿಕೊಂಡಿತ್ತು. ಪರೀಕ್ಷಾ ಹಂತದಲ್ಲಿ ಇದನ್ನು 2,000 ಬಾರಿ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಎಂದು ವರದಿಯಾಗಿದೆ.

Jack Dorsey

ಬ್ಲೂಸ್ಕೈ ಆ್ಯಪ್‌ನ ಇಂಟರ್ಫೇಸ್ ಅನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಅಪ್ಲಿಕೇಶನ್‌ನಲ್ಲಿರುವ ಪ್ಲಸ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಬಳಕೆದಾರರು ಫೋಟೋಗಳನ್ನು ಒಳಗೊಂಡಂತೆ 256 ಅಕ್ಷರಗಳ ಪೋಸ್ಟ್ಅನ್ನು ಸುಲಭವಾಗಿ ರಚಿಸಬಹುದು. ಟ್ವಿಟ್ಟರ್‌ನಂತೆಯೇ ಬ್ಲೂಸ್ಕೈನಲ್ಲಿ ಲೈಕ್ಸ್, ರೀಪೋಸ್ಟ್, ಫಾಲೋ, ಹಾಗೂ ರಿಪ್ಲೈ ಮಾಡಬಹುದಾದ ಫೀಚರ್‌ಗಳಿವೆ. ಆದರೆ ಇದರಲ್ಲಿ ವ್ಯಕ್ತಿಗಳಿಗೆ ನೇರ ಸಂದೇಶ ಕಳುಹಿಸುವ ಫೀಚರ್ ಇಲ್ಲ. ಇದನ್ನೂ ಓದಿ: ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

elon musk jack dorsey

ಬ್ಲೂಸ್ಕೈನ ಯೋಜನೆಯನ್ನು 2019ರಲ್ಲಿ ಟ್ವಿಟ್ಟರ್ ಅಭಿವೃದ್ಧಿಪಡಿಸಿತ್ತು. ಆದರೆ ಬಳಿಕ 2022ರಲ್ಲಿ ಅದನ್ನು ಸ್ವತಂತ್ರ್ಯ ಕಂಪನಿಯಾಗಿ ಪ್ರತ್ಯೇಕಗೊಳಿಸಲಾಯಿತು. ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧಿನಪಡಿಸಿಕೊಳ್ಳುವುದಕ್ಕೂ 1 ವಾರ ಮೊದಲೇ ಡಾರ್ಸೆ ಬ್ಲೂಸ್ಕೈಗೆ ಬೀಟಾ ಪರೀಕ್ಷಕರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

Share This Article
Leave a Comment

Leave a Reply

Your email address will not be published. Required fields are marked *