ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಭಾಷಣ ವಿರುದ್ಧ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ತಮ್ಮ ವಿರುದ್ಧದ ಟೀಕೆಗಳ ವಿರುದ್ಧ ಮೌನ ಮುರಿದಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣಗಳ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅವರು ತಮ್ಮ ವಿರುದ್ಧದ ಟೀಕೆ ಬಗ್ಗೆ ಸ್ಪಷ್ಟನೆ ನೀಡಿದರು. ಪ್ರಧಾನಿ ಮೋದಿ ಕುರಿತದ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದ ಪಾಟ್ ಪದದ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮೋದಿ ಹೇಳಿರುವ ಅರ್ಥದಲ್ಲಿಯೇ ಪೊಟ್ಯಾಟೋ, ಆನಿಯನ್, ಟೊಮೆಟೊ ಅರ್ಥವನ್ನೇ ಹೇಳಿದ್ದೇನೆ. ಅಕ್ಷರಗಳನ್ನು ಉಲ್ಟಾ ಬರೆದಿದ್ದೇನೆ ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಫೇಕ್ ಅಕೌಂಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಆ ರೀತಿ ಪಾಠ ಮಾಡಿಲ್ಲ. ಆದರೆ ಪಕ್ಷಕ್ಕೆ ಒಂದು, ವೈಯಕ್ತಿಕ ವಿಚಾರಕ್ಕೆ ಒಂದು ಅಕೌಂಟ್ ಇಟ್ಟುಕೊಳ್ಳಿ ಎಂದು ಹೇಳಿದ್ದೇನೆ. ಆದರೆ ನಾನು ಮಲ್ಟಿಪಲ್ ಅಕೌಂಟ್ ಬಗ್ಗೆ ಹೇಳಿದ್ದೆ. ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಎಂದು ನಾನು ಎಂದು ಹೇಳಿಲ್ಲ. ಮಲ್ಟಿಪಲ್ ಅಕೌಂಟ್ ಮತ್ತು ನಕಲಿ ಅಕೌಂಟ್ ವ್ಯತ್ಯಾಸವಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಮ್ಯಾ ಒಬ್ಬಳು ವಯ್ಯಾರಿ, ನಟನೆ ಮಾಡೋದಷ್ಟೆ ಅವಳ ಕೆಲಸ : ಸೊಗಡು ಶಿವಣ್ಣ
Advertisement
ನಟ ಜಗ್ಗೇಶ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು ನಾನೇನು ಮಾತನಾಡಲ್ಲ ಎಂದರು. ಇದನ್ನೂ ಓದಿ: ರಮ್ಯಾ ವಿರುದ್ಧ ಸೈಬರ್ ಕ್ರೈಂಗೆ ದೂರು