– ಕೊಪ್ಪಳ ಜಿಲ್ಲಾ ಎಸ್‍ಪಿ ಕಚೇರಿಗೆ ಬಂದು ರಕ್ಷಣೆ ಕೊಡಿ ಅಂದ್ಳು ವಧು
ಕೊಪ್ಪಳ: ಫಸ್ಟ್ ನೈಟ್ ದಿನದಂದೇ ವಧು ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ನವ ವಧು ಗಾಯತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ದಿಢೀರ್ ಅಂತಾ ಗುರುವಾರ ಸಂಜೆ ಆಗಮಿಸಿದ್ದಾರೆ.
ಮಾಧ್ಯಮಗಳಲ್ಲಿ ವಧು ನಾಪತ್ತೆ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತ ವಧು ನಾಪತ್ತೆ ಕುರಿತು ಸ್ಪಷ್ಟನೆ ನೀಡಲು ಖುದ್ದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಅಲ್ಲದೇ ನಮ್ಮ ಜೀವಕ್ಕೆ ಅಪಾಯವಿದ್ದು, ನಮಗೆ ರಕ್ಷಣೆ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.
Advertisement
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯತ್ರಿ, ನನ್ನನ್ನು ಯಾರೂ ಅಪಹರಣ ಮಾಡಿಲ್ಲ, ನಾನು ಸ್ವ-ಇಚ್ಛೆಯಿಂದಲೇ ಅವರೊಂದಿಗೆ ಹೋಗಿದ್ದೇನೆ. ನಾನು ಅಂಜುಕುಮಾರ್ ಮೊದಲಿನಿಂದಲೂ ಪ್ರೀತಿಸುತ್ತಿದ್ದೆವು. ನಾವು ಈಗಾಗಲೇ ಮದುವೆಯಾಗಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ವಿರೋಧವಿತ್ತು. ವಿಷಯ ಗೊತ್ತಿದ್ದರೂ ಸಹ ನಮ್ಮ ಕುಟುಂಬದವರು ನಮ್ಮ ಮಾವನ ಜೊತೆ ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದರು. ಹೀಗಾಗಿ ನಾನು ಒಪ್ಪಿಯೇ ಅಂಜನ್ ಜೊತೆ ಹೋಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಈ ಹಿನ್ನೆಲೆಯಲ್ಲಿ ಕಿಡ್ನ್ಯಾಪ್ ದೂರು ನೀಡಿದ್ದ ಸಂಬಂಧಿಕರು ಪೇಚಿಗೆ ಸಿಲುಕಿದ್ದಾರೆ. ಅಲ್ಲದೇ ಕಾರಟಗಿಯಲ್ಲಿ ಸಂಬಂಧಿಕರ ವಿರುದ್ಧವೂ ಪ್ರತಿ ದೂರು ಕೊಡಲು ಗಾಯತ್ರಿ ಹಾಗೂ ಅಂಜುಕುಮಾರ್ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?
ಕಳೆದ 15 ದಿನದ ಹಿಂದಷ್ಟೇ ಮಲ್ಲನಗೌಡ ಮತ್ತು ಗಾಯತ್ರಿ ಮದುವೆ ನಡೆದಿತ್ತು. ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ 2 ಕುಟುಂಬಗಳ ಒಪ್ಪಿ ಮದುವೆ ಮಾಡಿಕೊಟ್ಟಿದ್ದರು. ಗಂಗಾವತಿ ತಾಲೂಕಿನ ಗುಡುರು ಗ್ರಾಮದಲ್ಲಿ ಹಿರಿಯರು ನಿಶ್ಚಯಿಸಿದಂತೆ ವಧುವಿನ ತವರು ಮನೆಯಲ್ಲೇ ಫಸ್ಟ್ ನೈಟ್ ನಿಗದಿಯಾಗಿತ್ತು. ಆದರೆ ಆ ಮೊದಲ ರಾತ್ರಿಯಂದೇ ಯುವಕರ ಗುಂಪೊಂದು ಬಂದು ನವ ವಧು ಗಾಯತ್ರಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು.
ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು 6 ಜನ ಸಹಚರರು ಸೇರಿ ವಧುವನ್ನು ಕಿಡ್ನಾಪ್ ಮಾಡಿದ್ದರು. ಮನೆಯಲ್ಲಿದ್ದವರು ಇದನ್ನು ತಡೆಯಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದಂತೆಯೇ ಸಂಬಂಧಿಕರು ಸಮೀಪದ ಕಾರಟಗಿ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣವನ್ನು ದಾಖಲಿಸಿದ್ದರು. ಇದನ್ನೂ ಓದಿ: ಮದ್ವೆ ಆಯ್ತು ಅಂತಾ ನೆಮ್ಮದಿಯಿಂದಿದ್ದ ನವಜೋಡಿಗೆ ಮೊದಲ ರಾತ್ರಿ ದಿನವೇ ಕಾದಿತ್ತು ಆಪತ್ತು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv