– ಕಬ್ಬನ್ ಪಾರ್ಕ್ ಬಳಿಯೂ ಡ್ರಿಫ್ಟ್
ಬೆಂಗಳೂರು: ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್ (Car Drifting) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ (Rikki Rai) ವಿಚಾರಣೆ ವೇಳೆ ನಾನು ಕಾರು ಓಡಿಸಿಯೇ ಇಲ್ಲ ಎಂದಿದ್ದರು. ಅಲ್ಲದೆ ರಿಕ್ಕಿ ರೈ ಡ್ರೈವರ್ ಕಾರು ಓಡಿಸಿದ್ದು ನಾನು ಎಂದು ಹೇಳಿಕೆ ಕೊಟ್ಟಿದ್ದ. ಆದರೆ ಪೊಲೀಸರು ಕಾರಿನ ಬಗ್ಗೆ ಪ್ರಶ್ನೆ ಮಾಡಿದಾಗ ಚಾಲಕನ ಹೇಳಿಕೆಗಳಲ್ಲಿ ಸಂದೇಹ ಬಂದಿದೆ.
ಲ್ಯಾಂಬೋರ್ಗಿನಿ ಕಾರಿಗೆ (Lamborghini Car) ಎಷ್ಟು ಗೇರ್ ಇದೆ. ಕಾರು ಸ್ಟಾರ್ಟ್ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಚಾಲಕ ಕಾರಿಗೆ ಕೀ ಇದೆ, ಆರು ಗೇರ್ ಇರುತ್ತೆ ಎಂದು ಉತ್ತರ ನೀಡಿದ್ದಾನೆ. ಅಸಲಿಗೆ ಲ್ಯಾಂಬೋರ್ಗಿನಿ ಕಾರಿಗೆ ಗೇರ್ ಇರೋದಿಲ್ಲ, ಕೀ ಸ್ಟಾರ್ಟ್ ಬದಲು ಸ್ವಿಚ್ ಸ್ಟಾರ್ಟ್ ಇರಲಿದೆ. ಹೀಗಾಗಿ ಮತ್ತೆ ರಿಕ್ಕಿ ರೈ ಕಾರು ಚಾಲನೆ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಸಾಕ್ಷ್ಯಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ
ರಿಕ್ಕಿ ರೈ ಕಾರು ಚಾಲನೆ ಖಚಿತ ಪಡಿಸಲು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಟೆಕ್ನಿಕಲ್ ಮೊರೆ ಹೋಗಿದ್ದಾರೆ. ಸಿಡಿಆರ್ ರಿಪೋರ್ಟ್, ಸಿಸಿಟಿವಿ ದೃಶ್ಯಾವಳಿ, ಆರ್‌ಟಿಓ ಹಾಗೂ ಎಫ್‌ಎಸ್‌ಎಲ್ ತಜ್ಞರಿಂದ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮಧ್ಯೆ, ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಡ್ರಿಫ್ಟಿಂಗ್ ಮಾಡಿದ ದಿನವೇ ಕಬ್ಬನ್ ಪಾರ್ಕ್ ಬಳಿಯೂ ಡ್ರಿಫ್ಟಿಂಗ್ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

