-ಬಳಿಕ ಪೊಲೀಸರಿಗೆ ಶರಣಾದ ಆರೋಪಿ
ಕೊಪ್ಪಳ: ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮೆಯನ್ನು ತಾನೇ ಮದುವೆಯಾಗಬೇಕೆಂದು ಆಕೆಯ ಮಾಜಿ ಪ್ರಿಯಕರನನ್ನು ಹತೈಗೈದಿರುವುದಾಗಿ ವಿಷಯ ಬೆಳಕಿಗೆ ಬಂದಿದೆ.
ಭಾನುವಾರ (ಆ.3) ರಾತ್ರಿ ಕೊಪ್ಪಳದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ನಿರ್ಮಿತಿ ಕೇಂದ್ರದ ಸಮೀಪ ಮಸೀದಿ ಮುಂದೆ ಕೊಪ್ಪಳದ ಸೈಲಾನ್‌ಪುರ ಓಣಿಯ ಮೂಲದ ಆರೋಪಿ ಸಾದಿಕ್ ಗವಿಸಿದ್ಧಪ್ಪ ನಾಯಕ(27) ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.ಇದನ್ನೂ ಓದಿ: ಸಾರಿಗೆ ಮುಷ್ಕರ ನಿಲ್ಲಿಸಲು KSRTC, BMTC ಕೊನೆಯ ಕಸರತ್ತು
ಘಟನೆ ಸಂಬಂಧ ಮೃತನ ಕುಟುಂಬಸ್ಥರು ಸಾದಿಕ್ ಮತ್ತು ಇತರ ಮೂವರು ಸೇರಿ ಕೊಲೆ ಮಾಡಿದ್ದಾಗಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಬಿಎನ್‌ಸ್ 103(1) 2023 ಹಾಗೂ ಎಸ್ಸಿ/ಎಸ್ಟಿ ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಎರಡು ಮಚ್ಚುಗಳು ಪತ್ತೆಯಾಗಿದ್ದವು.
ಕೊಲೆ ನಡೆದಿದ್ದು ಹೇಗೆ?
ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತ ಗವಿಸಿದ್ದಪ್ಪ ನಾಯಕ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ. ಈ ವೇಳೆ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಬಳಿ ಸಾದಿಕ್ ಪೊಲೀಸರಿಗೆ ಶರಣಾಗಿ ನಾನೊಬ್ಬನೇ ಕೊಲೆ ಮಾಡಿರುವುದಾಗಿ ತಿಳಿಸಿದ್ದ.
ಹಿನ್ನೆಲೆ ಏನು?
ಕಳೆದ ಕೆಲ ದಿನಗಳ ಹಿಂದೆ ಕೃಷಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ಗವಿಸಿದ್ದಪ್ಪ ನಾಯಕ ಮತ್ತು ಬಾನು ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ಜಾಗದಲ್ಲಿ ಪರಿಚಯ ಆಗಿದ್ದ ಇವರು, ನಂತರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇಷ್ಟೇ ಅಲ್ಲದೇ ಸುಮಾರು 7 ತಿಂಗಳ ಹಿಂದೆ ಮೃತ ಗವಿಸಿದ್ದಪ್ಪ ಮತ್ತು ಆಗ ಅಪ್ರಾಪ್ತೆ ಆಗಿದ್ದ ಬಾನು ಮದುವೆಯಾಗಲು ಓಡಿ ಹೋಗಿದ್ದರು. ಆಗ ಬಾನು ಅಪ್ರಾಪ್ತೆ ಆಗಿದ್ದರಿಂದ ರಾಜಿ ಪಂಚಾಯಿತಿ ನಡೆದು, ಇವರನ್ನು ಬೇರೆ ಮಾಡಿದ್ದರು. ಘಟನೆ ನಂತರ ಇಬ್ಬರನ್ನೂ ಕೆಲಸ ಬಿಡಿಸಲಾಗಿತ್ತು. ಇದೇ ವೇಳೆ ಬಾನು ಆರೋಪಿ ಸಾದಿಕ್‌ನನ್ನು ಪ್ರೀತಿಸಿದ್ದಳು. ಜೊತೆಗೆ ಗವಿಸಿದ್ದಪ್ಪನ ಜೊತೆಗೂ ಪ್ರೀತಿ ಮುಂದುವರೆದಿತ್ತು.
ಸ್ವಲ್ಪ ದಿನಗಳ ಬಳಿಕ ಆರೋಪಿ ಸಾದಿಕ್‌ಗೆ ಗವಿಸಿದ್ದಪ್ಪ ಹಾಗೂ ಬಾನು ಪ್ರೀತಿ ಬಗ್ಗೆ ವಿಷಯ ಗೊತ್ತಾಗಿತ್ತು. ಇದ್ರಿಂದ ರೊಚ್ಚಿಗೆದ್ದ ಸಾದಿಕ್ ಗವಿಸಿದ್ದಪ್ಪನಿಗೆ ತಕರಾರು ಮಾಡಿದ್ದ. ಇದಕ್ಕೆಲ್ಲಾ ತಲೆಕಡೆಸಿಕೊಳ್ಳದ ಗವಿಸಿದ್ದಪ್ಪ ಹಾಗೆಯೇ ಪ್ರೀತಿ ಮುಂದುವರೆಸಿದ್ದ. ಕೊನೆಗೆ ನಾನೇ ಬಾನು ಅನ್ನು ಮದುವೆಯಾಗಬೇಕೆಂದು ಸಾದಿಕ್ ಮಚ್ಚಿನಿಂದ ಕೊಚ್ಚಿ ಗವಿಸಿದ್ದಪ್ಪ ನಾಯಕನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ