– ತನ್ನದಲ್ಲದ ತಪ್ಪಿಗೆ ಕೊಲೆಯಾದ ನತದೃಷ್ಟೆ
ಕಲಬುರಗಿ: ಕಲಬುರಗಿಯ ರಾಮನಗರದ ನಿವಾಸಿಯಾಗಿದ್ದ ಮಹಿಳೆ ಶರ್ಮಿಳಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನ್ನದಲ್ಲದ ತಪ್ಪಿಗೆ ಶರ್ಮಿಳಾ ಕೊಲೆಯಾಗಿದ್ದಾಳೆ ಎಂಬ ಅಂಶ ಬೆಳಕಿಗೆ ಬಂದಿದೆ.
ನ. 15 ರಂದು ರಾಮನಗರದ ನಿವಾಸದಲ್ಲಿ ಶರ್ಮಿಳಾ ಅವರ ಕೊಲೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಹಂತದಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ಸದ್ಯ ಕೊಲೆ ಮಾಡಿದ್ದ ಆರೋಪಿ ಕೃಷ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೇ ಆರೋಪಿ ಕೃಷ್ಣ ಕೊಲೆಯಾದ ಶರ್ಮಿಳಾರ ಗಂಡ ಸಂಜಾಯ್‍ರ ಅಕ್ಕನ ಮಗನಾಗಿದ್ದಾನೆ.
Advertisement
Advertisement
ಕಾರಣವೇನು?
ಕೊಲೆಯಾದ ಶರ್ಮಿಳಾ ಪತಿ ಸಂಜಯ್ ಮದುವೆಗೂ ಮುನ್ನ ಆರೋಪಿ ಕೃಷ್ಣನ ತಂಗಿ ಪೂಜಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಮದುವೆಗೆ ಮುನ್ನ ಪೂಜಾಳನ್ನು ನಿರಾಕರಿಸಿ ಶರ್ಮಿಳಾರ ಕೈ ಹಿಡಿದಿದ್ದ. ಬಳಿಕ ಸಂಜಯ್, ಶರ್ಮಿಳಾ ಮದುವೆಯಾಗಿ ಸುಖಿ ಸಂಸಾರ ಆರಂಭಿಸಿದ್ದರು. ಅಲ್ಲದೇ ಈ ದಂಪತಿಗೆ ಒಂದು ಗಂಡು ಮಗು ಕೂಡ ಜನಿಸಿತ್ತು. ಮದುವೆಗೂ ಮುನ್ನ ನಡೆದ ಘಟನೆ ಬಗ್ಗೆ ಶರ್ಮಿಳಾ ಅವರಿಗೂ ತಿಳಿದಿತ್ತು. ಆದರೆ ದಂಪತಿಗೆ ಮಗುವಾದ ಬಳಿಕ ಕುಟುಂಬದೊಂದಿಗೆ ಹೊಂದಿಕೊಂಡು ನಡೆದಿದ್ದರು. ಇಬ್ಬರ ಸುಖಿ ಸಂಸಾರ ಕಂಡ ಕೃಷ್ಣ ಮಾತ್ರ ತನ್ನ ತಂಗಿಯ ಸಾವಿಗೆ ದ್ವೇಷ ಸಾಧಿಸುತ್ತಿದ್ದ.
Advertisement
Advertisement
ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಮದುವೆ ನಿರಾಕರಿಸಿದಕ್ಕೆ ಆರೋಪಿ ಕೃಷ್ಣ ತಂಗಿ ತೀವ್ರವಾಗಿ ಅಘಾತಗೊಂಡಿದ್ದಳು. ಅಲ್ಲದೇ ಇದೇ ನೋವಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ತನ್ನ ತಂಗಿಯ ಸಾವಿಗೆ ಸಂಜಯ್ ಜೀವನದಲ್ಲಿ ಬಂದ ಶರ್ಮಿಳಾ ಕಾರಣ ಎಂದು ತಿಳಿದಿದ್ದ ಕೃಷ್ಣ ಮನಸ್ಸಿನಲ್ಲೇ ದ್ವೇಷ ಸಾಧಿಸಿದ್ದ. ಅಲ್ಲದೇ ಇಬ್ಬರ ಸಂಸಾರ ನೋಡುತ್ತಿದ್ದ ಕೃಷ್ಣ ತನ್ನ ತಂಗಿಯ ಸಾವಿಗೆ ಕಾರಣರಾದ ಬಗ್ಗೆ ದ್ವೇಷ ಸಾಧಿಸುತ್ತಿದ್ದ. ಆದರೂ ಸಂಜಯ್ ನೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದ ಕೃಷ್ಣ ಆಗಾಗ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಮಾತನಾಡಿಕೊಂಡು ಹೋಗುತ್ತಿದ್ದ. ಇದರಂತೆ ನ.15 ರಂದು ಶರ್ಮಿಳಾಗೆ ಫೋನ್ ಮಾಡಿದ್ದ ಕೃಷ್ಣ ಮನೆಯಲ್ಲಿ ಒಬ್ಬಳೆ ಇರುವ ಬಗ್ಗೆ ಮಾಹಿತಿ ಪಡೆದಿದ್ದ. ಬಳಿಕ ನೇರ ಸಂಜಯ್ ಮನೆಗೆ ಧಾವಿಸಿದ್ದ ಕೃಷ್ಣ ಶರ್ಮಿಳಾರನ್ನು ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದ.
ಸಿಕ್ಕಿಬಿದ್ದಿದ್ದು ಹೇಗೆ?
ಆರೋಪಿ ಕೃಷ್ಣ, ಶರ್ಮಿಳಾರನ್ನು ಕೊಲೆ ಮಾಡಲು ಚಾಕು ಬಳಸಿದ್ದ. ಕೊಲೆಯಾದ ಬಳಿಕ ಚಾಕುವಿಗೆ ಅಂಟಿಕೊಂಡಿದ್ದ ರಕ್ತವನ್ನು ಮನೆಯಲ್ಲಿ ತೊಳೆದು ಇಟ್ಟಿದ್ದ. ಆದರೆ ಈ ವೇಳೆ ತನ್ನ ಕೈನಲ್ಲಿದ್ದ ವಾಚ್ ಅಲ್ಲೇ ಬಿಚ್ಚಿಟ್ಟಿದ್ದ ಆರೋಪಿ ಅದನ್ನು ಅಲ್ಲೇ ಮರೆತು ತೆರಳಿದ್ದ. ಪ್ರಕರಣ ಕುರಿತು ತನಿಖೆ ಆರಂಭಿಸಿದ ಕಲಬುರಗಿ ಪೊಲೀಸರು ಕೊಲೆಯಾದ ಸ್ಥಳದಲ್ಲಿ ಸಿಕ್ಕ ವಾಚ್ ಜಾಡು ಹಿಡಿದು ಘಟನೆ ನಡೆದ ವೇಳೆ ಆ ಪ್ರದೇಶದಲ್ಲಿದ್ದ ಮೊಬೈಲ್ ನೆಟ್‍ವರ್ಕ್ ಬಗ್ಗೆ ಮಾಹಿತಿ ಪಡೆದಿದ್ದರು. ಅಲ್ಲದೇ ಕೊಲೆಯಾದ ಶರ್ಮಿಳಾ ಫೋನ್‍ಗೆ ಕೊನೆಯ ಬಾರಿ ಕೃಷ್ಣ ಫೋನ್ ಮಾಡಿದ್ದ ಸಂಗತಿಯೂ ಬೆಳಕಿಗೆ ಬಂದಿತ್ತು. ಶರ್ಮಿಳಾ ಅಂತ್ಯ ಸಂಸ್ಕಾರದಲ್ಲೂ ಆರೋಪಿ ಭಾಗವಹಿಸಿರಲಿಲ್ಲ.
ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿ ಪಡೆದ ಪೊಲೀಸರು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಬಂಧನಕ್ಕಾಗಿ ಬಲೆ ಬೀಸಿದ್ದರು. ಇಂದು ಆರೋಪಿ ನಗರ ರೈಲ್ವೇ ಟ್ರ್ಯಾಕ್ ಬಳಿ ಇದ್ದ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಕೃಷ್ಣ ಪೊಲೀಸರ ಮುಂದೇ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ತನ್ನದಲ್ಲದ ತಪ್ಪಿಗೆ ಮಾತ್ರ ಶರ್ಮಿಳಾ ಕೊಲೆಯಾಗಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews