ಬೆಂಗಳೂರು: ಛಲವಾದಿಪಾಳ್ಯ ವಾರ್ಡ್‍ನ ಬಿಜೆಪಿ ಕಾರ್ಪೊರೇಟರ್ ರೇಖಾ ಪತಿ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಆರೋಪಿ ಎಂದು ಹೇಳಲಾಗುತ್ತಿರುವ ನವೀನ್ ಗೂ ಕದಿರೇಶ್ ಹತ್ತಿರದ ಸಂಬಂಧಿ ಯುವತಿಯ ನಡುವೆ ಪ್ರೇಮಾಂಕುರವಾಗಿತ್ತು. ನವೀನ್ ಆ ಯುವತಿಯೊಂದಿಗೆ ಓಡಿಹೋಗಿ ಬೇರೆ ಕಡೆ ನೆಲೆಸಲು ನಿರ್ಧರಿಸಿದ್ದ. ಈ ವಿಷಯ ತಿಳಿದ ಕದಿರೇಶ್ ಮತ್ತು ಸ್ನೇಹಿತರು ನವೀನ್ ನನ್ನು ಕರೆಸಿ ಹಲ್ಲೆ ನಡೆಸಿ ಯುವತಿಯ ಸಹವಾಸಕ್ಕೆ ಬರದಂತೆ ಎಚ್ಚರಿಸಿದ್ರು.
ಈ ವಿಚಾರವಾಗಿ ಪದೇ ಪದೇ ಜಗಳ, ಮನಸ್ತಾಪ ನಡೆಯುತ್ತಲೇ ಇತ್ತು. ಇದೇ ವಿಚಾರವಾಗಿ ಬುಧವಾರ ತನ್ನ ತಮ್ಮ ವಿನಯ್ ಹಾಗೂ ಮತ್ತಿಬ್ಬರು ಸ್ನೇಹಿತರೊಡನೆ ಬಂದ ನವೀನ್ ಕೊಲೆಗೈದಿದ್ದಾನೆ ಎಂದು ಹೇಳಲಾಗ್ತಿದೆ.
ಕದಿರೇಶ್ ಮರಣೋತ್ತರ ಪರೀಕ್ಷೆ ನಡೆದು ಮನೆಯವರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಛಲವಾದಿ ಪಾಳ್ಯದ ಬಿಜೆಪಿ ಕಚೇರಿ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಂದು ಸಂಜೆ 4 ಗಂಟೆಗೆ ಮೈಸೂರು ರಸ್ತೆಯ ಹಳೇಗುಡ್ಡದಹಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಬುಧವಾರ ಸಂಜೆ ನಗರದ ಆಂಜಿನಪ್ಪ ಗಾರ್ಡನ್ ಬಳಿ ಇರುವ ಕದಿರೇಶ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕದಿರೇಶ್ ಕುತ್ತಿಗೆಗೆ ಚಾಕುವಿನಿಂದಅವರಿಗೆ ಇರಿದು ಪರಾರಿಯಾಗಿದ್ದರು.