ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ್ದ 14 ನಿವೇಶನ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ತಮ್ಮ ಹೋರಾಟ ನಿಲ್ಲಿಸಲು ಹಣಕಾಸಿನ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Advertisement
ಸಿಎಂ ಪತ್ನಿ ಪಾರ್ವತಿ ಆಪ್ತ ಸಹಾಯಕನ ಹೆಸರಿನಲ್ಲಿ ತಮಗೆ ಆಮಿಷ ಒಡ್ಡಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆ ಒಳಪಡಿಸುವ ಅರ್ಜಿಯನ್ನು ವಾಪಸ್ ಪಡೆಯಲು ಹಣದ ಅಮಿಷ ನೀಡಲಾಗಿದೆ. ಪತ್ರಕರ್ತನೊಬ್ಬನ ಜೊತೆ ಬಂದು ವ್ಯವಹಾರ ಕುದುರಿಸಲು ಯತ್ನಿಸಿ ಇದಕ್ಕೆ ಸ್ನೇಹಮಯಿ ಕೃಷ್ಣ ಒಪ್ಪದ ಹಿನ್ನಲೆಯಲ್ಲಿ ಅವರ ಪತ್ನಿ ಹಾಗೂ ಮಗನ ಕಡೆಯಿಂದಲೂ ಒತ್ತಡ ಹಾಕಿಸಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Advertisement
Advertisement
ಮೈಸೂರಿನ ಬಿಜೆಪಿ ಮುಖಂಡ ಹರ್ಷ ತಾನು ಪಾರ್ವತಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದಾರೆ. ಮೈಸೂರಿನ ಸ್ಥಳೀಯ ವಾಹಿನಿಯ ಪತ್ರಕರ್ತ ಶ್ರೀನಿಧಿ ಇವರನ್ನು ಸ್ನೇಹಮಹಿ ಕೃಷ್ಣ ಬಳಿಗೆ ಕರೆದುಕೊಂಡು ಬಂದಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಈಗ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯ ಸೇರಿದಂತೆ ಫೋನ್ ಕರೆ ಮಾಡಿರುವ ಸಾಕ್ಷಿಯನ್ನು ನೀಡಿದ್ದಾರೆ.
Advertisement
ಡಿ.13 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಳಿ ಸ್ನೇಹಮಯಿ ಕೃಷ್ಣರನ್ನ ಭೇಟಿ ಮಾಡಿದ ಹರ್ಷ ಮತ್ತು ಶ್ರೀನಿಧಿ, ಪಾರ್ವತಮ್ಮ ಮಾನಸಿಕವಾಗಿ ನೊಂದಿದ್ದಾರೆ. ಪ್ರಕರಣವನ್ನ ಸಿಬಿಐಗೆ ವಹಿಸಬೇಕೆನ್ನುವ ಅರ್ಜಿ ವಾಪಸ್ ಪಡೆಯಿರಿ. ಲೋಕಾಯುಕ್ತ ವಿಚಾರಣೆ ಏನು ಸಮಸ್ಯೆ ಇಲ್ಲ. ಸಿಬಿಐ ಆದರೆ ನಮಗೆ ಸಮಸ್ಯೆ ಇದೆ. ನಿಮಗೆ ಎಷ್ಟು ಹಣ ಬೇಕು ಕೇಳಿ ನಾವು ಕೊಡುತ್ತೇವೆಂದು ಹರ್ಷ ಹೇಳಿದ್ದ ಎಂದು ಸ್ನೇಹಮಯಿ ಕೃಷ್ಣ ದೂರಿದ್ದಾರೆ. ಡಿ.15 ರಂದು ಸ್ನೇಹಮಯಿ ಕೃಷ್ಣ ಮನೆಗೆ ತೆರಳಿ ಅವರ ಮಗನ ಬಳಿಯಲ್ಲೂ ಇದೇ ವಿಚಾರ ಪ್ರಸ್ತಾಪಿಸಿದ್ದಾರೆ. ಈಗಾಗಲೇ ಇನ್ನೊಬ್ಬ ಹೋರಾಟಗಾರನಿಗೆ ಮೂರು ಕೋಟಿ ಮಾತನಾಡಿ ಒಂದೂವರೆ ಕೋಟಿ ಕೊಟ್ಟಿದ್ದೇವೆ ಎಂದು ಹರ್ಷ ಹಣದ ಬ್ಯಾಗ್ ತೋರಿಸಿದ್ದಾನೆ. ಹಣದ ಆಮಿಷಕ್ಕೆ ಸ್ನೇಹಮಯಿ ಕೃಷ್ಣನ ಮಗ ಕೂಡ ಒಪ್ಪಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.