ಬೆಂಗಳೂರು: ಮೂರು ವರ್ಷದ ಮಗು ಸಂಜನಾ ಸೇರಿದಂತೆ ಏಳು ಮಂದಿ ಅಮಾಯಕರನ್ನು ಬಲಿ ಪಡೆದಿದ್ದ ಬೆಂಗಳೂರಿನ ಈಜಿಪುರದಲ್ಲಿನ ಕಟ್ಟಡ ದುರಂತಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ದುರಂತಕ್ಕೆ ಸಿಲಿಂಡರ್ ಸ್ಫೋಟ ಕಾರಣವಲ್ಲ. ಬದಲಿಗೆ ಹಳೆಯದಾಗಿದ್ದರಿಂದ ಬಿಲ್ಡಿಂಗ್ ಕುಸಿದು ಬಿದ್ದಿದೆ ಅಂತ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ. ಆದ್ರೆ ಸಿಲಿಂಡರ್ ಸ್ಫೋಟವಾಗಿದೆ ಅಂತಾ ಸುಳ್ಳು ಹೇಳಿ ಮಾಲೀಕರು ಪ್ರಕರಣವನ್ನು ಮುಚ್ಚಲು ಹುನ್ನಾರ ನಡೆಸುತ್ತಿದ್ದಾರೆ.
Advertisement
ಇದನ್ನೂ ಓದಿ: ಜೆಸಿಬಿ ಕಾರ್ಯಾಚರಣೆ ವೇಳೆ ಕೇಳಿತು ಮಗು ಅಳೋ ಸದ್ದು – ಸಾವು ಗೆದ್ದು ಬಂದಳು 3 ವರ್ಷದ ಸಂಜನಾ
Advertisement
ದೂರು ಕೊಟ್ಟ ಮೃತ ಕಲಾವತಿಯ ಮಗನಿಗೆ ಧಮ್ಕಿ ಹಾಕಿದ್ದು ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದಾರೆ. ಜೊತೆಗೆ ಕಾಸು ಮಾಡಲು ಇದೇ ಟೈಂ ಅಂತ ಭಾವಿಸಿರುವ ಖಾಕಿಗಳು ಪ್ರಕರಣ ಮುಚ್ಚಿ ಹಾಕಲು 50 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆಂಬ ಮಾಹಿತಿಯೊಂದು ತಿಳಿದುಬಂದಿದೆ.
Advertisement
Advertisement
ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಪುಟ್ಟ ಕಂದಮ್ಮ ಸಂಜನಾ ಪಕ್ಕದಲ್ಲೇ ಇದ್ದ ಟ್ರಾನ್ಸ್ಫಾರ್ಮರ್ನಲ್ಲಾದ ಶಾರ್ಟ್ ಸಕ್ರ್ಯೂಟ್ನಿಂದ ಸುಟ್ಟ ಗಾಯಕ್ಕೆ ಒಳಗಾಗಿದ್ಳು ಅಂತಾ ವರದಿ ಸ್ಪಷ್ಟಪಡಿಸಿದೆ. ಶೇಕಡಾ 60ರಷ್ಟು ಬೆಂದು ಹೋಗಿದ್ದ ಪುಟ್ಟ ಬಾಲಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು.
ಇದನ್ನೂ ಓದಿ: ಬೆಂಗ್ಳೂರಲ್ಲಿ ಸಿಲಿಂಡರ್ ಸ್ಫೋಟದಿಂದ 2 ಅಂತಸ್ತಿನ ಮನೆ ಕುಸಿತ – ನಾಲ್ವರು ಸಾವು, ಅವಶೇಷದಡಿ ಗರ್ಭಿಣಿ
ಏನಾಗಿತ್ತು?: ಅಕ್ಟೋಬರ್ 16ರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಅಂತಸ್ತಿನ ಮನೆ ಕುಸಿದು ಏಳು ಜನರು ಮೃತಪಟ್ಟಿದ್ದರು. ಗ್ರೀನ್ವ್ಯೂ ಹೋಟೆಲ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ 7.10ಕ್ಕೆ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸುಮಾರು 7.15ಕ್ಕೆ ಕಟ್ಟಡ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಯ ಮೇಲೂ ಗೋಡೆ ಕುಸಿದಿದ್ದು ಸುರೇಶ್, ಸುಬಾನ್, ಸೋಮಶೇಖರ್ ಎಂಬವರು ಗಾಯಗೊಂಡಿದ್ದರು. ಸುಮಾರು 20 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬ್ಯಾಚುಲರ್ಸ್ ಸುಮಾರು 5-6 ವರ್ಷದಿಂದ ಈ ಕಟ್ಟಡದಲ್ಲಿ ನೆಲೆಸಿದ್ದರು. ಘಟನೆಯಿಂದಾಗಿ ಅಕ್ಕಪಕ್ಕದ ಮನೆಗಳೂ ಕೂಡ ಬಿರುಕುಬಿಟ್ಟಿತ್ತು.
ಇದನ್ನೂ ಓದಿ: ಸಾವು ಗೆದ್ದು ಬಂದಿದ್ದ ಸಂಜನಾ ಬದುಕುಳಿಯಲಿಲ್ಲ