ಚಂಡೀಗಢ: ಇಬ್ಬರು ಅವಳಿ ಸಹೋದರರು ಉತ್ತಾರಖಂಡದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ)ಯಿಂದ ತರಬೇತಿ ಪಡೆದು ಒಂದೇ ಬಾರಿಗೆ ಸೇನೆಗೆ ಸೇರ್ಪಡೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಅವಳಿ ಸಹೋದರರಾದ ಅಭಿನವ್ ಮತ್ತು ಪರಿಣವ್ ಇಬ್ಬರು ಕೇವಲ ಎರಡು ನಿಮಿಷಗಳ ಅಂತರದಲ್ಲಿ ಹುಟ್ಟಿದ್ದಾರೆ. ಇವರಿಬ್ಬರೂ ಜಲಂಧರ್ ಮತ್ತು ಲುಧಿಯಾನಾದಲ್ಲಿ ಎಂಜಿನಿಯರಿಂಗ್ ಪದವಿ ಓದಿದ ಬಳಿಕ ಭಾರತೀಯ ಸೇನೆ ಸೇರುವ ಕನಸನ್ನು ಕಂಡಿದ್ದಾರೆ.
Advertisement
Advertisement
ಕನಸು ನನಸು ಮಾಡುವ ನಿಟ್ಟಿನಲ್ಲಿ ಐಎಂಎ ಆಯ್ಕೆಯಾಗಿ ಶನಿವಾರ ಪದವಿ ಪಡೆದು ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇಬ್ಬರನ್ನು ಭಾರತೀಯ ಸೇನೆಯ ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ.
Advertisement
ಈ ಬಗ್ಗೆ ಐಎಂಎ, “ಮಿಲಿಟರಿ ಅಕಾಡೆಮಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಭಿನವ್ ಮತ್ತು ಪರಿಣವ್ ಇಬ್ಬರೂ ಸಹೋದರರು ಐಎಂಎ ಡೆಹ್ರಾಡೂನ್‍ನಲ್ಲಿ ಪದವಿಯನ್ನು ಪಡೆದಿದ್ದಾರೆ. ಆದರೆ ಇಬ್ಬರನ್ನು ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ” ಎಂದು ಟ್ವೀಟ್ ಮಾಡಿ ತಿಳಿಸಿದೆ.
Advertisement
ಅನೇಕ ಬಾರಿ ಡ್ರಿಲ್ ಶಿಕ್ಷಕರು ಪರಿಣವ್ ಬದಲು ನನ್ನನ್ನು ಕರೆಯುತ್ತಿದ್ದರು. ನನ್ನ ಬದಲು ಅವನ ಹೆಸರು ಕರೆಯುತ್ತಿದ್ದರು. ಎಷ್ಟೋ ಬಾರಿ ಸೇನೆಯ ಬೋಧಕರು ಕೂಡ ಗೊಂದಲಕ್ಕೆ ಒಳಗಾಗಿದ್ದರು ಎಂದು ಅಭಿನವ್ ತರಬೇತಿ ವೇಳೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಕೆಲವೊಮ್ಮೆ ನನ್ನ ಊಟದ ಮೆಸ್‍ನಲ್ಲಿ ತುಂಬಾ ಸಿಬ್ಬಂದಿ ಇದ್ದರೆ, ನಾನು ನನ್ನ ಸಹೋದರನ ಮೆಸ್‍ಗೆ ಹೋಗುತ್ತಿದ್ದೆ. ಆಗ ಯಾರು ನನ್ನ ಗುರುತನ್ನು ಪತ್ತೆ ಮಾಡುತ್ತಿರಲಿಲ್ಲ ಎಂದು ಹಾಸ್ಯಮಯ ಸನ್ನಿವೇಶಗಳನ್ನು ಪರಿಣವ್ ಹಂಚಿಕೊಂಡಿದ್ದಾರೆ.
ಇಬ್ಬರು ಸಹೋದರರು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದರು. ಒಬ್ಬ 100 ಅಂಕಗಳನ್ನು ಗಳಿಸಿದರೆ, ಮತ್ತೊಬ್ಬ ಅಷ್ಟೇ ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರು ಕೊನೆಗೆ 99 ಅಂಕ ಪಡೆಯುತ್ತಿದ್ದನು. ಇಬ್ಬರು ಸೇನೆಗೆ ಸೇರುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಂದೆ ಅಶೋಕ್ ತಿಳಿಸಿದರು.
ಮಿಲಿಟರಿ ಆಕಾಡೆಮಿಯಲ್ಲಿ ನಡೆದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಇಬ್ಬರು ಎಲ್ಲರ ಗಮನ ಸೆಳೆದಿದ್ದರು. ಅವಳಿ ಮಕ್ಕಳ ಸಾಧನೆಯಿಂದ ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.