ಕೋಲ್ಕತ್ತಾ: ಐಸಿಸಿ ವಿಶ್ವಕಪ್ ಕ್ರಿಕೆಟ್ ಅಬ್ಬರ ಆರಂಭವಾಗಿದ್ದು, ಕ್ರಿಕೆಟ್ ಪ್ರಿಯ ಅಭಿಮಾನಿಗಳನ್ನು ಹೆಚ್ಚು ಹೊಂದಿರುವ ಭಾರತದಲ್ಲಿ ಇದರ ಕ್ರೇಜ್ ಹೆಚ್ಚಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲೇ ವಿಶ್ವಕಪ್ ಸಮಯದಲ್ಲಿ ಹೊಸ ಟಿವಿಗಳ ಮಾರಾಟ ಕೂಡ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಆದರೆ ಈ ಬಾರಿ ಹೆಚ್ಚಾದ ಬಿಸಿಲಿನ ತಾಪಮಾನದಿಂದಾಗಿ ಹೆಚ್ಚು ಮಂದಿ ಟಿವಿ ಖರೀದಿ ಮಾಡುವ ಬದಲು ಎಸಿಗಳ ಖರೀದಿ ಮಾಡಿದ್ದಾರೆ. ಪರಿಣಾಮ ಮಾರುಕಟ್ಟೆಯಲ್ಲಿ ಎಸಿ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
Advertisement
ಸಾಮಾನ್ಯವಾಗಿ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದಂತೆ ಟಿವಿ ಮಾರಾಟಗಾರ ಸಂಖ್ಯೆಯಲ್ಲೂ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ದೇಶದಲ್ಲಿ ತಾಪಮಾನ ಏರಿಕೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದಾಗಿ, ಐಸಿಸಿ ವಿಶ್ವಕಪ್ ಆಕರ್ಷಣೆಯ ನಡುವೆಯೂ ಎಸಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.
Advertisement
2017-18ರಲ್ಲಿ ಎಸಿ ಮಾರಾಟದಲ್ಲಿ ಭಾರೀ ಇಳಿಕೆಯಾಗಿತ್ತು, ಆದರೆ ಈ ಬಾರಿ ಏಪ್ರಿಲ್‍ನಿಂದ ಮೇ ತಿಂಗಳವರೆಗೆ ಎಸಿ ಮಾರಾಟ ಶೇ.18-20ರಷ್ಟು ಹೆಚ್ಚಾಗಿದೆ. ಇದೇ ಟ್ರೆಂಡ್ ಜೂನ್ ಮೊದಲ ವಾರದಲ್ಲೂ ಮುಂದುವರಿಯುತ್ತಿದೆ. ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಟಿವಿ ಮಾರಾಟ ಪ್ರಮಾಣದ ಕೇವಲ ಶೇ.5-8 ರಷ್ಟು ಮಾತ್ರ ಏರಿಕೆಯಾಗಿದೆ.
Advertisement
Advertisement
ಭಾರೀ ಹೊಡೆತ:
ವಿಶ್ವಕಪ್ ಪಂದ್ಯಾವಳಿ ವಿಕ್ಷೀಸುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದ್ದರೂ ಕೂಡ ಶೇ.80-90ರಷ್ಟು ಏರಿಕೆಯಾಗುತ್ತಿದ್ದ ಟಿವಿ ಮಾರಾಟ ಪ್ರಮಾಣ ಬಾರಿ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಬಾರಿ ಕ್ರಿಕೆಟ್ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದ್ದರೂ ಸಹ ಟಿವಿ ಖರೀದಿಯಲ್ಲಿ ಮಾತ್ರ ಕುಸಿತದಿಂದ ಎಲೆಕ್ಟ್ರಾನಿಕ್ಸ್ ವ್ಯಾಪಾರಿಗಳಿಗೆ ಹೊಡೆತ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಥಾಮ್ಸನ್ ಮತ್ತು ಕೊಡಕ್ ಟಿವಿ ತಯಾರಿಕಾ ಸಂಸ್ಥೆಯ ಸೂಪರ್ ಪ್ಲಾಸ್ಟ್ರೋನಿಕ್ಸ್ ಸಿಇಓ ಅವನೀತ್ ಸಿಂಗ್, ಕಳೆದ ಎರಡು ತಿಂಗಳಿಂದ ಗ್ರಾಹಕರ ಕೊಂಡುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಲೇ ಇದ್ದು, ಎಸಿ ಖರೀದಿಸಿದ ಬಳಿಕ ಜನ ಬೇರೆ ಉತ್ಪನ್ನಗಳಿಗೆ ಸಾವಿರ ರೂ.ಗಳನ್ನೂ ಖರ್ಚು ಮಾಡಲು ಜನರು ಹಿಂಜರಿಯುತ್ತಾರೆ ಎಂದಿದ್ದಾರೆ.
ಗ್ರೇಟ್ ಈಸ್ಟರ್ನ್ ರಿಟೇಲ್‍ನ ನಿರ್ದೇಶಕ ಪುಲಕಿತ್ ಬೇದ್ ಮಾತನಾಡಿ, ಒಟ್ಟಾರೆಯಾಗಿ ಕಳೆದ ದೀಪಾವಳಿಯಿಂದಲೂ ಟಿವಿ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ. ಟಿವಿ ಮಾರಾಟ ಮೇ ತಿಂಗಳಿನಲ್ಲಿ ಮಾತ್ರ ಶೇ.20ರಷ್ಟು ಹೆಚ್ಚಾಗಿತ್ತು. ಆದರೆ 2018ರ ರಷ್ಯಾದ ಫುಟ್ಬಾಲ್ ಫಿಫಾ ವಿಶ್ವಕಪ್ ಸಮಯ ಸೇರಿದಂತೆ 2018 ರ ಜೂನ್ ನಿಂದ ಮಾರಾಟ ಪ್ರಮಾಣ ಭಾರೀ ಇಳಿಕೆ ಕಂಡಿದೆ ಎಂದಿದ್ದಾರೆ.
ವಿಜಯ್ ಸೇಲ್ಸ್, ಗ್ರೇಟ್ ಎಲೆಕ್ಟ್ರಾನಿಕ್ಸ್ ಮತ್ತು ಕೊಹಿನೂರ್ ಎಲೆಕ್ಟ್ರಾನಿಕ್‍ಗಳಂತಹ ಉತ್ತಮ ಬ್ರಾಂಡ್‍ಗಳು ಸಹ ಈ ವರ್ಷ ಹೆಚ್ಚಿನ ಪ್ರಚಾರವನ್ನು ಕಂಡಿಲ್ಲ. ಕಂಪನಿಗಳಲ್ಲಿ ಹಳೆಯ ಮಾದರಿ ಟಿವಿ ಗಳಿಂದ ಹೊಸ ಮಾಡೆಲ್‍ಗಳ ಟಿವಿಗಳು ಮಾರಾಟವಾಗದೇ ಹಾಗೆ ಉಳಿದಿವೆ. ಕಳೆದ ಎರಡು ವಿಶ್ವಕಪ್‍ಗಳಲ್ಲಿ ಕ್ರಿಕೆಟ್ ಆಟಗಾರರು ಬ್ರಾಂಡ್‍ಗಳ ಬಗ್ಗೆ ಜಾಹೀರಾತು ನೀಡಿದ್ದರೂ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ ಎಂದು ವಿಜಯ್ ಸೇಲ್ಸ್ ತಿಳಿಸಿದ್ದಾರೆ.
2015ರ ವಿಶ್ವಕಪ್ ಸಮಯದಲ್ಲಿ 55 ಇಂಚುಗಳ ಪರದೆಯ ಟಿವಿಯ ಮಾರಾಟವನ್ನು ದ್ವಿಗುಣಗೊಂಡಿತ್ತು. ಆದರೆ, ಈ ವರ್ಷದ ವಿಶ್ವಕಪ್ ಸಮಯದಲ್ಲಿ 55 ಇಂಚುಗಳ ಟಿವಿಯ ಮಾರಾಟ ಶೇ.20-25 ರಷ್ಟು ಮಾತ್ರ ಹೆಚ್ಚಾಗಿದೆ. ಅಲ್ಲದೇ 26, 32 ಮತ್ತು 45 ಇಂಚುಗಳ ಪರದೆಯ ಟಿವಿಗೆ ಬಹು ಬೇಡಿಕೆ ಉಂಟಾಗಿದ್ದು, ಮಾರಾಟದಲ್ಲಿ ಶೇ.90ರಷ್ಟು ಏರಿಕೆ ಕಂಡಿದೆ ಎಂದು ಸೋನಿ ಇಂಡಿಯಾ ಕಂಪನಿಯ ಮುಖ್ಯಸ್ಥ ಸಚ್ಚಿನ್ ರೈ ಹೇಳಿದ್ದಾರೆ. ಇತ್ತ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪಿದರೆ ಬಹುಶಃ ಟಿವಿ ಮಾರಾಟದಲ್ಲಿ ಏರಿಕೆ ಕಾಣಬಹುದೆಂದು ಟಿವಿ ಮಾರಾಟ ಉದ್ಯಮಗಳು ಭರವಸೆ ಹೊಂದಿವೆ.
ಈ ಬಾರಿಯ ವಿಶ್ವಕಪ್ ಅವಧಿ ಆಫೀಸ್ ಸಮಯದಲ್ಲಿ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರಿಯರು ತಮ್ಮ ಫೋನ್‍ಗಳಲ್ಲೇ ವೀಕ್ಷಣೆ ಮಾಡುತ್ತಿದ್ದಾರೆ. ಈ ಕಾರಣದಿಂದ ಟಿವಿ ಮಾರುಕಟ್ಟೆಗೆ ಹೊಡೆತ ಬಿದ್ದಿರಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]