ಮುಂಬೈ: ಅರೇಬಿಯನ್ ನೈಟ್ಸ್ ಆಧಾರಿತ ಟಿವಿ ಸಿರೀಸ್ `ಅಲಿ ಬಾಬಾ ದಸ್ತಾನ್-ಇ-ಕಾಬೂಲ್’ನಲ್ಲಿ ಶಹಜಾದಿ ಮರಿಯಮ್ ಪಾತ್ರದಲ್ಲಿ ನಟಿಸಿರುವ ನಟಿ (TV Actor) ತುನಿಷಾ ಶರ್ಮಾ (20) (Tunisha Sharma) ಇಂದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ತಮ್ಮ ಟಿ.ವಿ ಕಾರ್ಯಕ್ರಮದ ಸೆಟ್‌ವೊಂದರ ಮೇಕಪ್ ರೂಮ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಸ್ಪತ್ರೆಗೆ (Hospital) ಸಾಗಿಸುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್
ಘಟನಾ ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲಿಸಿದಾಗ ತುನಿಷಾ ಸಹನಟ ಶೀಜಾನ್ ಮೊಹಮ್ಮದ್ ಖಾನ್ ಅವರ ಮೇಕಪ್ ರೂಮ್‌ನಲ್ಲಿದ್ದರು ಎಂಬುದಾಗಿ ತಿಳಿದುಬಂದಿದೆ. ತನ್ನ ರೂಮ್ ಬಾಗಿಲು ಹಾಕಿದ್ದನ್ನು ನೋಡಿ ಶೀಜಾನ್ ಕರೆ ಮಾಡಿದ್ದಾರೆ. ಪದೇ ಪದೇ ಕರೆದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದ್ದಾರೆ. ಅಷ್ಟರಲ್ಲಿ ಅನಾಹುತ ನಡೆದಿದೆ. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಿಲು ನಿರಾಕರಿಸಿದ ಕತಾರ್ ಏರ್‌ವೇಸ್‌ಗೆ 3 ಲಕ್ಷ ದಂಡ
20 ವರ್ಷದ ನಟಿ ತುನಿಷಾ ಶರ್ಮಾ ಬಾಲ್ಯದಿಂದಲೇ ಅಭಿನಯ ಕಲೆ ರೂಢಿಸಿಕೊಂಡಿದ್ದರು. `ಚಕ್ರವರ್ತಿ ಅಶೋಕ ಸಾಮ್ರಾಟ್, ಗಬ್ಬರ್ ಪೂಂಚಾಲಾ, ಶೇರ್-ಎ-ಪಂಜಾಬ್, ಮಹಾರಾಜ ರಂಜಿತ್ ಸಿಂಗ್, ಇಂಟರ್ನೆಟ್ ವಾಲಾ ಲವ್ ಮತ್ತು ಇಷ್ಟೇ ಸುಭಾನ್ ಅಲ್ಲಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ದುರ್ಗಾ ರಾಣಿ ಸಿಂಗ್ ಮತ್ತು `ದಬಾಂಗ್-3′ ನಂತಹ ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ (Salman Khan) ಮತ್ತು ಸೋನಾಕ್ಷಿ ಸಿನ್ಹಾ (Sonakshi Sinha) ಅಭಿನಯದ ದಬಾಂಗ್ 3ನಲ್ಲಿ ಅವರು ಅತಿಥಿ ಪಾತ್ರ ನಿರ್ವಹಿಸಿದ್ದರು.
ಅಲ್ಲದೇ ಖ್ಯಾತ ಬಾಲಿವುಡ್ (Bollywood) ನಟಿಯರಾದ ಕತ್ರಿನಾ ಕೈಫ್ (Katrina Kaif), ವಿದ್ಯಾ ಬಾಲನ್ (Vidya Balan) ಅವರಂತಹ ತಾರೆಗಳೊಂದಿಗೆ ಪರದೆ ಹಂಚಿಕೊಂಡಿದ್ದಾರೆ. ಫಿತೂರ್ ಸಿನಿಮಾದಲ್ಲಿ ಕತ್ರಿನಾ ಕೈಫ್ ಅವರೊಂದಿಗೆ, ಕಹಾನಿ-2 ಚಿತ್ರದಲ್ಲಿ ವಿದ್ಯಾಬಾಲನ್ ಅವರೊಂದಿಗೂ ಪರದೆ ಹಂಚಿಕೊಂಡಿದ್ದರು. ನಂತರ ಟಿ.ಟಿ ಸೀರಿಸ್ ನಲ್ಲಿ ಜನಪ್ರಿಯರಾಗಿದ್ದರು.