ಅಂಕಾರಾ: ಟರ್ಕಿಯಲ್ಲಿ (Turkey Syria Earthquake) ಸಂಭವಿಸಿದ ಭೀಕರ ಭೂಕಂಪದಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ಕಂಪನಿಯ ಟೆಕ್ಕಿ (Bengaluru Techie) ಮೃತದೇಹ ಅವಶೇಷಗಳಡಿ ಪತ್ತೆಯಾಗಿದೆ. ಶನಿವಾರ ಬೆಳಗ್ಗೆಯಷ್ಟೆ ವಿಜಯ್ ಕುಮಾರ್ ಪಾಸ್‌ಪೋರ್ಟ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅವರ ಮೃತದೇಹ ಪತ್ತೆಯಾಗಿದೆ.
ಡ್ರೆಹಾಡೂನ್ ಮೂಲದ ವಿಜಯ್ ಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತದೇಹ ಶನಿವಾರ ಮುಂಜಾನೆ ಪೂರ್ವ ಅನಟೋಲಿಯಾ ಪ್ರದೇಶದ ಮಲತ್ಯಾ ನಗರದ 24 ಫ್ಲೋರ್ ಅವಸಾರ್ ಹೋಟೆಲ್‌ನ ಅವಶೇಷಗಳಡಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಟ್ವೀಟ್ ಮೂಲಕ ಭಾರತದ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF
Advertisement
Advertisement
ವಿಜಯಕುಮಾರ್ ಕೈಯಲ್ಲಿದ್ದ ಟ್ಯಾಟೊ ಮೂಲಕ ಮೃತದೇಹ ಗುರುತು ಪತ್ತೆಯಾಗಿದೆ. ಉತ್ತರಾಖಂಡ್‌ನಲ್ಲಿರುವ ಕುಟುಂಬ ಸದಸ್ಯರು ರಕ್ಷಣಾ ಸ್ಥಳದಿಂದ ಕಳುಹಿಸಲಾದ ಪೋಟೋದ ಮೂಲಕ ವಿಜಯ್ ಕುಮಾರ್ ಎಡಗೈಯಲ್ಲಿದ್ದ ಟ್ಯಾಟೋ ಮೂಲಕ ಗುರುತು ಸಿಕ್ಕಿದೆ.
Advertisement
2023 ರ ಜನವರಿ 23 ರಂದು ವಿಜಯ್ ಕುಮಾರ್ ಟರ್ಕಿಗೆ ಹೋಗಿದ್ದರು. ಟರ್ಕಿಯ ಮಾಲತ್ಯದಲ್ಲಿರುವ ಅವಸರ್ ಹೋಟೆಲ್‌ನ ಎರಡನೇ ಮಹಡಿಯಲ್ಲಿ ತಂಗಿದ್ದರು. ಹೋಟೆಲ್‌ಗೆ ಸಮೀಪವಿರುವ ಗ್ಯಾಸ್ ಪೈಪ್ ಅಳವಡಿಕೆಯ ಯೋಜನೆಯನ್ನು ಪೂರ್ಣಗೊಳಿಸಿ ಮುಂದಿನ ವಾರ ಭಾರತಕ್ಕೆ ಮರಳಬೇಕಿತ್ತು. ಉತ್ತರಾಖಂಡ್‌ನ ಪೌರಿ ಗರ್ವಾಲ್‌ನ ಸ್ಥಳೀಯರು ಮತ್ತು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಬೆಂಗಳೂರು ಮೂಲದ ಆಕ್ಸಿಪ್ಲಾಂಟ್ಸ್ ಇಂಡಿಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಎಂಜಿನಿಯರ್ ಆಗಿ ಕುಮಾರ್ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್ ಪತ್ತೆ
Advertisement
ವಿಜಯ್ ಕುಮಾರ್‌ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಉತ್ತರಾಖಂಡ್‌ನಲ್ಲಿರುವ ತಮ್ಮ ಮನೆಯಿಂದ ಬೆಂಗಳೂರು ಮೂಲದ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಂನಲ್ಲಿ ಕೆಲಸ ಮಾಡುತ್ತಿದ್ದರು. ಟರ್ಕಿಯ ಕಂಪನಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಜನವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿದ್ದರು. ಬಳಿಕ ಜನವರಿ 23 ರಂದು ದೆಹಲಿಯಿಂದ ಇಸ್ತಾಂಬುಲ್ ಮೂಲಕ ಟರ್ಕಿಯ ಮಲತ್ಯಾಗೆ ಹೋಗಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k