ನವದೆಹಲಿ: ವೇದಿಕೆ ಮೇಲೆ ಟರ್ಬನ್ ಧರಿಸುವರೆಲ್ಲಾ ‘ಸರ್ದಾರ್’ ಆಗುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಅಮೃತಸರದ ರೋಡ್ ಶೋ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಮೋದಿ ಮತ್ತು ಕೇಜ್ರಿವಾಲ್ ಅವರು ಪಂಜಾಬ್‍ಗೆ ಬಂದಾಗ ವೇದಿಕೆಯ ಮೇಲೆ ಟರ್ಬನ್ ಧರಿಸುತ್ತಾರೆ. ಕೇವಲ ಟರ್ಬನ್ ಧರಿಸುವುದರಿಂದ ಅವರು ಸರ್ದಾರ್ ಆಗುವುದಿಲ್ಲ. ಇಬ್ಬರೂ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (ಆರ್‌ಎಸ್‍ಎಸ್) ಜನಿಸಿದವರು. ಒಬ್ಬರು ಆರ್‍ಎಸ್‍ಎಸ್ ಬೆಂಬಲಿತವಾದ ಆಂದೋಲನವನ್ನು ಪ್ರಾರಂಭಿಸಿದರು. ಇನ್ನೊಬ್ಬರು ಆರ್‌ಎಸ್‍ಎಸ್ ಸದಸ್ಯರಾಗಿದ್ದರು. ಇಬ್ಬರೂ ಕೂಡ ಒಂದೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ
Advertisement
Advertisement
ಇದೇ ವೇಳೆ ನಾನು ಎಲ್ಲಿಗೆ ಹೋದರೂ ಜನರಲ್ಲಿರುವ ಉತ್ಸಾಹವನ್ನು ನೋಡುತ್ತಿದ್ದೇನೆ. ಮುಖ್ಯಮಂತ್ರಿ ಚನ್ನಿ ಮತ್ತು ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ತರುತ್ತದೆ ಎಂದು ಸಾರ್ವಜನಿಕರು ಅರ್ಥಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು
Advertisement