ಅಭಿಮಾನಿಗಳಿಗಾಗಿ ಹಾಡು ಹಾಡಿದ ಅಪ್ಪು – ಹುಚ್ಚೆದ್ದು ಕುಣಿದ ಜನರು

Public TV
1 Min Read
collage punith rrajkumar2

ತುಮಕೂರು: ನಟ ಪುನೀತ್ ರಾಜಕುಮಾರ್ ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇಂದು ಖಾಸಗಿ ಕಾರ್ಯಕ್ರಮಕ್ಕೆ ನಗರಕ್ಕೆ ಬಂದಿದ್ದ ಅವರು, ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡು ಹಾಡಿ ರಂಜಿಸಿದ್ದಾರೆ. ಅಪ್ಪು ಕಂಠಸಿರಿಯಲ್ಲಿ ಹಾಡು ಕೇಳುತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಕೆಲವರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

punith raj kumar

ಈ ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ನವರಸ ನಾಯಕ ಜಗ್ಗೇಶ್, ತುರುವೇಕೆರೆ ಶಾಸಕ ಮಸಾಲ ಜಯರಾಮ್ ಸಾಥ್ ನೀಡಿದ್ದಾರೆ. ಉತಾನಿ ಮೆಗಾಮಾರ್ಟ್ ಅಂಗಡಿಯ ಉದ್ಘಾಟಿಸಿದ ಪುನೀತ್ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಹಾಡು ಹಾಡಿದರು. ಅಭಿಮಾನಿಗಳು ಇನ್ನು ಹಾಡು ಹಾಡುವಂತೆ ಒತ್ತಾಯಿಸಿದರು. ಆದರೆ ಸಮಯದ ಅಭಾವದಿಂದ ಅಪ್ಪುಗೆ ಹಾಡಲು ಸಾಧ್ಯವಾಗಲಿಲ್ಲ.

ಈ ನಡುವೆ ವೇದಿಕೆ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಕೂಡಾ ಪುನೀತ್ ರಾಜಕುಮಾರ್‍ ಗಾಗಿ ಡಾ. ರಾಜಕುಮಾರ್ ಅಭಿನಯದ ಎರಡು ಕನಸು ಚಿತ್ರದ “ಎಂದೆಂದು ನಿನ್ನನ್ನು ಮರೆತು” ಹಾಡನ್ನು ಹಾಡಿದರು.

Share This Article