ತುಮಕೂರು: ಜನರು ಬೇಕಾದರೆ ಪೊರಕೆ ಏಟು ನೀಡಲಿ, ಅವರು ಯಾವಾಗ ಬೇಕಾದರೂ ಹೊಡೆಯಲಿ ನಾನು ತಿನ್ನುತ್ತೇನೆ. ಇದು ರಾಜಕೀಯ ಬದ್ಧತೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣವನ್ನು ನಾನು ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಬುಧವಾರ ಡಿಕೆ ಶಿವ ಕುಮಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟೀಕಿಸಿ ಯೋಗೇಶ್ವರ್, ಮಹಿಳೆಯಿಂದ ಪೊರಕೆಯಲ್ಲಿ ಡಿಕೆಶಿಗೆ ಹೊಡೆಸುತ್ತೇನೆ ಎಂದು ಹೇಳಿದ್ದಕ್ಕೆ ಸಚಿವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement
Advertisement
ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದ ಒಂದು ಹೋಬಳಿಯ ಜನತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಹಾಗಾಗಿ ಅಲ್ಲಿಯ ಜನರ ನಡುವೆ ಉತ್ತಮ ಬಾಂಧವ್ಯವಿದೆ. ಅದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧವಾಗಿದ್ದು, ಮದುವೆ ಎಂದರೇ ರಾಜಕೀಯ ಮದುವೆ ಅವರ ಹಾಗೇ ಮದುವೆಯಲ್ಲ. ನನ್ನದು ರಾಜಕೀಯ ಬದ್ಧತೆ. ಜನರು ಬೇಕಾದರೆ ಪೊರಕೆ ಏಟು ನೀಡಲಿ ನಾನು ತಿನ್ನುತ್ತೇನೆ, ಅವರು ಯಾವಾಗ ಬೇಕಾದರೂ ಹೊಡೆಯಲಿ ಎಂದು ಹೇಳಿದರು.
Advertisement
ಡಿಕೆಶಿ ವಿರುದ್ಧ ಸಾಮಾನ್ಯ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿ ತರುತ್ತೇನೆ ಎಂಬ ಸಿಪಿ ಯೋಗೇಶ್ವರ್ ಮಾತಿಗೆ ಸಿಡಿಮಿಡಿಕೊಂಡ ಅವರು, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಮೊದಲು ಗೆಲ್ಲಲಿ. ಬಳಿಕ ನನ್ನ ವಿರುದ್ಧ ಸಾಮಾನ್ಯರನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಮಹಿಳೆಯಿಂದ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ- ಡಿಕೆಶಿ ವಿರುದ್ಧ ಶಾಸಕ ಯೋಗೇಶ್ವರ್ ವಾಗ್ದಾಳಿ
Advertisement
ದಲಿತರ ಹತ್ಯೆ ಕುರಿತ ಸಿಪಿ ಯೋಗೇಶ್ವರ್ ಆರೋಪಕ್ಕೆ ಕಿಡಿಕಾರಿದ ಸಚಿವರು, ದಲಿತರ ಹತ್ಯೆ ಮಾಡಿದ್ದಾರೆ ಎನ್ನುವುದಕ್ಕೆ ಅವರು ಸಾಕ್ಷ್ಯ ತೋರಿಸಲಿ, ಬೇಕಾದರೆ ಕೇಸ್ ಹಾಕಲಿ. ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಅವರು ಸಿನಿಮಾ ನಟರು, ನಮ್ಮ ಯೋಗೀಶಣ್ಣ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ