ರಾಮನಗರ: ಚನ್ನಪಟ್ಟಣದಲ್ಲಿ ಸಾಮಾನ್ಯ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಇಂಧನ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಗೆಲ್ಲಿಸ್ತೀನಿ ಅಂತ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್ ಸವಾಲ್ ಹಾಕಿದ್ದಾರೆ.
ಇಂದು ರಾಮನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಬ್ರದರ್ಸ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು. ಚನ್ನಪಟ್ಟಣ ಕ್ಷೇತ್ರವನ್ನ ಮದುವೆ ಮಾಡಿಕೊಂಡಿದ್ದೇನೆ ಎನ್ನುವ ಸಚಿವ ಡಿ.ಕೆ ಶಿವಕುಮಾರ್ ಇಲ್ಲಿ ಯಾರನ್ನಾದ್ರೂ ಮದ್ವೆ ಮಾಡಿಕೊಂಡಿದ್ದು ಮುಂದಿನ ಚುನಾವಣೆಗೆ ನಿಲ್ಲಿಸ್ತಿದ್ದಾರಾ ಅನ್ನೋದನ್ನ ತಿಳಿಸಬೇಕು. ಇಲ್ಲವೇ ಚನ್ನಪಟ್ಟಣದಲ್ಲಿ ಮಹಿಳೆಯೊಬ್ಬಳ ಕೈಲಿ ಡಿಕೆಶಿ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ ಅಂತ ಸವಾಲ್ ಹಾಕಿದ್ರು.
Advertisement
Advertisement
ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಬೆಟ್ ಕಟ್ಟುತ್ತೆನೆ ಅಂತಾರೆ. ಮಂತ್ರಿಯಾದವರು ಜೂಜಿನ ಬಗ್ಗೆ ಮಾತನಾಡ್ತಾರೆ, ಗ್ಯಾಂಬ್ಲಿಂಗ್ ಆಡಿರಬೇಕು. ಚನ್ನಪಟ್ಟಣದಿಂದ ಸಾಮಾನ್ಯ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿ ಡಿಕೆಶಿ ವಿರುದ್ಧ ಗೆಲ್ಲಿಸ್ತೇನೆ. ಡಿ.ಕೆ ಶಿವಕುಮಾರ್ ಕನಕಪುರ ಕ್ಷೇತ್ರದಲ್ಲಿ ಯಾರನ್ನಾದ್ರೂ ನಿಲ್ಲಿಸಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿ. ಇದು ನನ್ನ ಬಹಿರಂಗ ಸವಾಲ್ ಅಂದ್ರು.
Advertisement
Advertisement
ಡಿ.ಕೆ ಸಹೋದರರು ತಮ್ಮ ಮನಸ್ಸಿನಲ್ಲಿದ್ದ ದ್ವೇಷವನ್ನ ಬಹಿರಂಗವಾಗಿ ಹೊರ ಹಾಕಿದ್ದಾರೆ. ಸಂಕ್ರಾಂತಿ ಬಳಿಕ ವಿವಿಧ ಪಕ್ಷಗಳ ಶಾಸಕರು ಬಿಜೆಪಿ ಸೇರಲಿದ್ದಾರೆ. ಇದನ್ನ ಸಹಿಸದೆ ಅವರು ನನ್ನ ಮೇಲೆ ಪಿತೂರಿ ಮಾಡುತ್ತಿದ್ದಾರೆ. ಈ ಹಿಂದೆ ಇಗ್ಗಲೂರು ಏತನೀರಾವರಿಗೆ ಚಾಲನೆ ನೀಡಿದ್ದು ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳು. ಇದೀಗ ಮತ್ತೆ ಅದಕ್ಕೆ ಚಾಲನೆ ನೀಡುವ ಮೂಲಕ ಸಿಎಂ ಜನರನ್ನ ಯಾಮಾರಿಸಿದ್ದಾರೆ. ಚನ್ನಪಟ್ಟಣದಲ್ಲಿ ವೀರಾವೇಶದಿಂದ ಮಾತನಾಡಿ ಮಾಗಡಿಯಲ್ಲಿ ನಿದ್ರೆಗೆ ಜಾರಿದ್ರು ಎಂತ ಹೇಳಿದ್ರು.
ಬುಧವಾರದ ಕಾರ್ಯಕ್ರಮಕ್ಕೆ ಬಲಪ್ರಯೋಗ ಮಾಡಿ ಜನರನ್ನ ಸೇರಿಸಿದ್ರು. ಸಿಎಂ ಮನವೊಲಿಸಲಿಕ್ಕೆ ಸಾಧನ ಸಮಾವೇಶ ಮಾಡಿದ್ರು. ಸಾರ್ವಜನಿಕ ಸಭೆಯಾಗಿದ್ರೆ ನಾನು ಹೋಗುತ್ತಿದೆ. ಕಾಂಗ್ರೆಸ್ ಸಮಾವೇಶ ಮಾಡಿ ಜನರನ್ನ ಕರೆತರಲಿ. 17 ರಂದು ನಾನು ಬಿಜೆಪಿಯ ಸಮಾವೇಶ ಮಾಡಿ ಶಕ್ತಿ ಪ್ರದರ್ಶನ ತೋರಿಸ್ತೇನೆ ಅಂದ್ರು. ಡಿಕೆಶಿ ನಾಲಿಗೆ ಮೇಲೆ ಹಿಡಿತವಿಲ್ಲ, ಹುಚ್ಚು ಹಿಡಿದಿರಬೇಕು. ಅಂಕೆ ಶಂಕೆಯಿಲ್ಲದಂತೆ ಮಾತನಾಡ್ತಾರೆ ಅಂತ ಹೇಳಿದ್ರು.
ಕನಕಪುರ ಕ್ಷೇತ್ರದಲ್ಲಿ ಹಲವಾರು ದಲಿತ ಮುಖಂಡರನ್ನ ಅಣ್ಣ ಕೊಲೆ ಮಾಡಿಸಿದ್ರೆ, ತಮ್ಮ ಚನ್ನಪಟ್ಟಣದಲ್ಲಿ ಇದೀಗ ಎರಡು ಕ್ವಾರಿ ನಡೆಸಿ ಅರಣ್ಯ ಸಂಪತನ್ನ ನಾಶ ಮಾಡ್ತಿದ್ದಾರೆ. ಸಚಿವ ಡಿಕೆಶಿಯ ಅಕ್ರಮ ಗಣಿಗಾರಿಕೆ ಕೇಸ್ ಹೈಕೋರ್ಟ್‍ನಲ್ಲಿ ಜೀವಂತವಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ತಲೆ ಎತ್ತಲಿದೆ ಅಂತ ಹೇಳಿದ್ರು. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ