ತುಮಕೂರು: ಸ್ವಪಕ್ಷದ ವಿರುದ್ಧವೇ ಹೇಳಿಕೊಡುತ್ತಾ ತಮ್ಮ ನಾಯಕರ ವಿರುದ್ಧ ಆಗಾಗ ಗುಡುಗುತ್ತಿದ್ದ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್‍ಗೆ ಇಂದಿನಿಂದ ಅಧಿಕೃತವಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ. ಗುಬ್ಬಿ ಕ್ಷೇತ್ರದಲ್ಲಿ ಪರ್ಯಾಯ ನಾಯಕನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಬಾಗಿಲು ಮುಚ್ಚಿದ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಕುಮಾರಸ್ವಾಮಿ ತೀರ್ಮಾನಕ್ಕೆ ವರಿಷ್ಠ ದೇವೇಗೌಡರು ಅಧಿಕೃತ ಮೊಹರು ಒತ್ತಿದ್ದಾರೆ. ಈ ನಡುವೆ ಶಾಸಕ ಶ್ರೀನಿವಾಸ್‍ಗೆ ಇತ್ತ ಜೆಡಿಎಸ್ ಇಲ್ಲದೇ, ಅತ್ತ ಕಾಂಗ್ರೆಸ್ ಅಲ್ಲದ ಅತಂತ್ರಭಾವ ಮೂಡಿದೆ.
Advertisement
ಕಳೆದ 2 ವರ್ಷಗಳಿಂದ ಮಾತೃಪಕ್ಷ ಜೆಡಿಎಸ್ ಮತ್ತು ಪಕ್ಷದ ನಾಯಕರ ವಿರುದ್ಧ ಶಾಸಕ ಗುಬ್ಬಿ ಶ್ರೀನಿವಾಸ್ ಹರಿಹಾಯುತ್ತಿದ್ದರು. ಕುಮಾರಸ್ವಾಮಿ ವಿರುದ್ಧವೇ ಹೆಚ್ಚಾಗಿ ಹೇಳಿಕೆ ಕೊಡ್ತಿದ್ದ ಶ್ರೀನಿವಾಸ್‍ಗೆ ನಿನ್ನೆ ಜೆಡಿಎಸ್ ಕಠಿಣ ಸಂದೇಶವೊಂದು ರವಾನಿಸಿದೆ. ತುಮಕೂರಿನ ಗುಬ್ಬಿ ಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪರ್ಯಾಯ ನಾಯಕನನ್ನು ಜೆಡಿಎಸ್‍ಗೆ ಸೇರಿಕೊಳ್ಳುವ ಮೂಲಕ ಮಾತೃಪಕ್ಷದ ಬಾಗಿಲು ಶ್ರೀನಿವಾಸ್‍ಗೆ ಮುಚ್ಚಲಾಗಿದೆ. ಇದನ್ನೂ ಓದಿ: ಅತ್ತೆ ಮನೆಗೆ ಮತ ಕೇಳಲು ಹೋದ ಸಿಎಂ ಬಸವರಾಜ ಬೊಮ್ಮಾಯಿ
Advertisement
Advertisement
ಸಮಾವೇಶದಲ್ಲಿ ಪಕ್ಷದ ಸೇರಿದ ಬಿಜೆಪಿಯ ಸಿ.ಎಸ್.ಪುರ ನಾಗರಾಜು ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಪಡಿಸುತ್ತಾರೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಜೆಡಿಎಸ್‍ನಲ್ಲಿ ಗುಬ್ಬಿ ಶ್ರೀನಿವಾಸರ ಅಧ್ಯಾಯ ಮುಗಿದ ಬಗ್ಗೆ ಪಕ್ಷದ ವರಿಷ್ಠ ದೇವೇಗೌಡರು ಸಹ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೂಲಕ ಜೆಡಿಎಸ್ ಜೊತೆಗಿನ ಎಲ್ಲ ನಂಟು ಶ್ರೀನಿವಾಸ ಕಳೆದುಕೊಂಡಿದ್ದಾರೆ ಎಂಬ ಸಂದೇಶವನ್ನು ದೇವೇಗೌಡರು ಹರಿಬಿಟ್ಟಿದ್ದಾರೆ. ಇದು ಗುಬ್ಬಿ ಶ್ರೀನಿವಾಸ್‍ಗೆ ಇನ್ನಿಲ್ಲದ ಆಘಾತ ತಂದಿದೆ. ಇದನ್ನೂ ಓದಿ: ಪ್ರೇಮ ವೈಫಲ್ಯ – ವೀಡಿಯೋ ಮಾಡಿಟ್ಟು ಜಿಮ್ ಟ್ರೈನರ್ ಆತ್ಮಹತ್ಯೆ
Advertisement
ಕುಮಾರಸ್ವಾಮಿ ವಿರುದ್ಧ ಮಾತಾಡಿದ್ರೂ ದೇವೇಗೌಡರ ವಿರುದ್ಧ ಮಾತಾಡದ ಶ್ರೀನಿವಾಸ್ ಗೌಡರು, ತಮ್ಮನ್ನು ಪಕ್ಷದಲ್ಲಿ ಉಳಿಸಿಕೊಳ್ತಾರೆ ಎಂಬ ನಂಬಿಕೆ ಈಗ ಹುಸಿ ಆಗಿದೆ. ಇನ್ನೊಂದೆಡೆ ಶ್ರೀನಿವಾಸ್ ಕಾಂಗ್ರೆಸ್‍ಗೆ ಸೇರುವುದಕ್ಕೂ ಸ್ಥಳೀಯ ಕಾಂಗ್ರೆಸ್ ಮುಖಂಡತ ವಿರೋಧ ಹೆಚ್ಚಾಗಿದೆ. ಬೇರೆ ಪಕ್ಷದಿಂದ ಹೊರ ಹಾಕಿದವರು ನಮಗೆ ಬೇಡ ಎನ್ನುತ್ತಿದ್ದಾರೆ. ಈ ಮೂಲಕ ಶ್ರೀನಿವಾಸ್ ಅವರು ಇತ್ತ ಜೆಡಿಎಸ್ಸೂ ಇಲ್ಲ, ಅತ್ತ ಕಾಂಗ್ರೆಸ್ಸೂ ಇಲ್ಲದೇ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 160 ಬಡವರ ಮನೆಗಳ ನೆಲಸಮಕ್ಕೆ ನೋಟಿಸ್ – ಬಲಾಢ್ಯರಿಗೆ ಯಾಕಿಲ್ಲ ನೋಟಿಸ್?
ಗುಬ್ಬಿ ಶ್ರೀನಿವಾಸ್ ತಮ್ಮ ಮನದ ನೋವನ್ನು ಹೊರ ಹಾಕಿದ್ದು, ಸಮಾವೇಶದಿಂದ ದೂರ ಇಟ್ಟು ನನಗೆ ಅವಮಾನ ಮಾಡಿದ್ದಾರೆ. ನಾನು ಯಾವತ್ತೂ ಪಕ್ಷ ಬಿಡ್ತೀನಿ ಅಂದಿರಲಿಲ್ಲ. ಯಾಕೆ ಹೀಗೆ ಮಾಡಿದ್ರೋ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ತೆನೆ’ ಪಕ್ಷದ ‘ಹೊರೆ’ ಇಳಿಸಿದರೂ ಶ್ರೀನಿವಾಸ್‍ಗೆ ಕಾಂಗ್ರೆಸ್ ಪಕ್ಷ ಕೈ ಹಿಡಿಯುವ ಸಾಧ್ಯತೆ ತೀರಾ ಕಡಿಮೆ ಇದೆ. ಪಕ್ಷದಲ್ಲಿನ ಆಂತರಿಕ ಮನಸ್ತಾಪಗಳನ್ನು ಬಹಿರಂಗಗೊಳಿಸಿ ಸಂಕಷ್ಟಕ್ಕೆ ಸಿಲುಕಿರುವ ಶ್ರೀನಿವಾಸ್ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗ್ತಿದೆ.