LatestBengaluru CityDistrictsKarnatakaMain Post

ಪ್ರೇಮ ವೈಫಲ್ಯ – ವೀಡಿಯೋ ಮಾಡಿಟ್ಟು ಜಿಮ್ ಟ್ರೈನರ್ ಆತ್ಮಹತ್ಯೆ

ಬೆಂಗಳೂರು: ಪ್ರೇಮ ವೈಫಲ್ಯದಿಂದ ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ..

ಕಾರ್ತಿಕ್ ಆತ್ಮಹತ್ಯೆಗೆ ಶರಣಾದ ಜಿಮ್ ಟ್ರೈನರ್. ಆರ್ ಆರ್ ನಗರದ ಮಾರಪ್ಪ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಕಳೆದ ಮೂರು ವರ್ಷಗಳಿಂದ ಕಾರ್ತಿಕ್ ಯುವತಿಯನ್ನು ಪ್ರೀತಿ ಮಾಡುತ್ತಿದ್ದರು. ಇತ್ತೀಚಿಗೆ ಕಾರ್ತಿಕ್‌ನಿಂದ ಯುವತಿ ದೂರವಾಗಿದ್ದರು.

love breakup

ಪ್ರೇಮ ವೈಫಲ್ಯದ ಬಗ್ಗೆ ಆಪ್ತರ ಬಳಿ ಸಹ ಕಾರ್ತಿಕ್ ಹೇಳಿಕೊಂಡಿದ್ದ.‌ ಈ ವಿಚಾರ ತಿಳಿದ ಪೋಷಕರು ಮದುವೆ ಮಾಡಲು ಮುಂದಾಗಿದ್ದರು. ಭಾನುವಾರ ಕಾರ್ತಿಕ್ ಗೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗಬೇಕಿದ್ದ ಪೋಷಕರು, ರೆಡಿಯಾಗುವಂತೆ ಸೂಚಿಸಿದ್ದರು. ಆದರೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೆಪಿಟಿಸಿಎಲ್ ಹೈಟೆನ್ಷನ್ ಲೈನ್‍ಗೆ ಮರ ತಗುಲಿ ಭಾರೀ ಸ್ಫೋಟ

ಆತ್ಮಹತ್ಯೆಗೂ ಮುನ್ನ ಪ್ರೇಮ ವೈಫಲ್ಯ ಬಗ್ಗೆ ವಿಡಿಯೋ ಮಾಡಿರುವ ಕಾರ್ತಿಕ್, ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ.‌ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ವೀಡಿಯೋ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related Articles

Leave a Reply

Your email address will not be published. Required fields are marked *