ತುಮಕೂರು: ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಬ್ಬ ದಲಿತ ನಾಯಕನನ್ನು ಸಿಎಂ ಮಾಡಿದೆ. ಅದೇ ರೀತಿ 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಬಹುತ ಪಡೆದು ಅಧಿಕಾರ ಹಿಡಿದರೆ ಇಲ್ಲೂ ಕೂಡ ದಲಿತರನ್ನು ಸಿಎಂ ಮಾಡಬೇಕು ಎಂದು ಹೇಳುವಂತಹ ಸನ್ನಿವೇಶ ಎದುರಾಗಬಹುದು ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
Advertisement
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ನಾಟಕದಲ್ಲಿ ದಲಿತ ಸಿಎಂ ಕೇಳುವಂತಾಗಬಹುದು. ಆದರೆ ಮುಂದಿನ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರೋದು ನಮ್ಮಲ್ಲೇರ ಕರ್ತವ್ಯ ಎಂದರು. ಇದನ್ನೂ ಓದಿ: ತಾಕತ್ತಿದ್ರೆ ಮೈಸೂರಿಗೆ ಬಂದು ಪಕ್ಷ ಸಂಘಟನೆ ಮಾಡಿ ಗೆಲ್ಲಿ- ಸಿದ್ದುಗೆ ಶ್ರೀನಿವಾಸ್ ಪ್ರಸಾದ್ ಚಾಲೆಂಜ್
Advertisement
Advertisement
ಇದೇ ವೇಳೆ ಕಾಂಗ್ರೆಸ್-ಬಿಜೆಪಿ ನಡುವಿನ ತಾಲಿಬಾನ್ ಜಗಳ ಕುರಿತಂತೆ ಮಾತನಾಡಿದ ಅವರು, ಯಾವುದೇ ಪಕ್ಷದವರಾಗಲಿ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತಾಡೋದು ಸರಿಯಲ್ಲ. ಕೀಳು ಮಾತುಗಳು ಕೀಳು ರಾಜಕಾರಣವಾಗಬಾರದು ಎಂದರು. ಜನಪ್ರತಿನಿಧಿಗಳು ಸಂಯಮ, ನಿಷ್ಠೆಯಿಂದ ಇರಬೇಕು ಎಂದು ಜನರು ಬಯಸುತ್ತಾರೆ. ಆದರೆ ನಾವುಗಳು ಸಂಸ್ಕøತಿಯ ಎಲ್ಲೆ ಮೀರಿ ಕೀಳುಮಟ್ಟದಲ್ಲಿ ಮಾತನಾಡಬಾರದು. ಇದು ಎಲ್ಲ ಪಕ್ಷದವರಿಗೂ ಅನ್ವಯಿಸುತ್ತದೆ ಎಂದರು. ಇದನ್ನೂ ಓದಿ: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದ್ಘಾಟನೆ